ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಖೋಟಾನೋಟು ತೋರಿಸಿ ಪಂಗನಾಮ; ನಾಲ್ವರು ಅಂತಾರಾಜ್ಯ ಖದೀಮರ ಸೆರೆ

ಯಲಹಂಕ: ಖೋಟಾನೋಟು ತೋರಿಸಿ ಮೂರು ಪಟ್ಟು ಹಣ ಹೆಚ್ಚು ಮಾಡಿ ಕೊಡ್ತೇವೆ ಎಂದು ವಂಚಿಸುತ್ತಿದ್ದ ಅಂತಾರಾಜ್ಯ ಖದೀಮರನ್ನು ಬೆಂಗಳೂರಿನ ಅಮೃತಹಳ್ಳಿ ‌ಪೊಲೀಸರು ಬಂಧಿಸಿದ್ದಾರೆ. ಆಂಧ್ರ, ತಮಿಳುನಾಡು ಮೂಲದ ನಟರಾಜನ್ @ ರಾಜಾರೆಡ್ಡಿ, ಬಾಲಾಜಿ, ವೆಂಕಟೇಶ, ರಾಕೇಶ ಬಂಧಿತರು.

ಬಂಧಿತರಿಂದ 5.85 ಲಕ್ಷ‌ ನಗದು, 80 ಗ್ರಾಂ ಚಿನ್ನಾಭರಣ, 20 ಕೋಟಿ ಚಿಲ್ಡ್ರನ್ಸ್ ನೋಟುಗಳು,10 ನಕಲಿ ಗೋಲ್ಡ್ ಬಿಸ್ಕೆಟ್,

ಹಾಗೂ ಕೃತ್ಯಕ್ಕೆ ಬಳಸಿದ್ದ 2 ಕಾರು ವಶಕ್ಕೆ ಪಡೆಯಲಾಗಿದೆ. ಮಕ್ಕಳ ಆಟಿಕೆ ನೋಟು ತೋರಿಸಿ ಹಣ ತ್ರಿಬಲ್ ಮಾಡಿಕೊಡುವುದಾಗಿ ಈ ಖದೀಮರು ವಂಚಿಸುತ್ತಿದ್ದು, ಸಾವಿರ ಕೊಟ್ಟರೆ 3 ಸಾವಿರ ಕೊಡುವುದಾಗಿ ನಂಬಿಸುತ್ತಿದ್ದರು.

ಈ ಗ್ಯಾಂಗ್ ಕಳೆದ ಅಕ್ಟೋಬರ್ ನಲ್ಲಿ ಜಕ್ಕೂರಿನಿಂದ ಇಬ್ಬರನ್ನು ಅಪಹರಿಸಿದ್ದರು. ತಿರುಪತಿ ಮೂಲದ ಸಂಗೀತಾ, ಆಕೆಯ ಕಾರು ಚಾಲಕ ಕೃಷ್ಣನನ್ನು ಕಿಡ್ನ್ಯಾಪ್ ಮಾಡಿದ್ದರು. ಜಕ್ಕೂರಿನಲ್ಲಿ ಪ್ರಾಪರ್ಟಿ ತೋರಿಸ್ತೀವಿ ಅಂತ ಕಾರು ಹತ್ತಿಸಿ,

ಜಕ್ಕೂರಿನಿಂದ ಯಲಹಂಕ ಮಾರ್ಗವಾಗಿ ಕರೆದೊಯ್ದು 10 ಲಕ್ಷ ದೋಚಿದ್ದರು.

ವಿಚಾರಣೆ ವೇಳೆ ಹೊಸಕೋಟೆ ಭಾಗದಲ್ಲೂ ಹಣ ತ್ರಿಬಲ್ ಮಾಡಿ‌ ಕೊಡೋದಾಗಿ ವಂಚಿಸಿದ್ದು, ಪ್ರೆಸ್ ಕಾರ್ಡ್, ಹಲವು ಮೊಬೈಲ್ ಗಳು, ನಕಲಿ ಚಿನ್ನದ ಬಿಸ್ಕೆತ್‌ ಗಳು ಪತ್ತೆಯಾಗಿವೆ. ಅಮೃತಹಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿ, ನಾಲ್ವರನ್ನು ಬಂಧಿಸಿದ್ದು, ತನಿಖೆ ಮುಂದುವರೆದಿದೆ.

Edited By : Nagesh Gaonkar
PublicNext

PublicNext

29/01/2022 04:58 pm

Cinque Terre

36.38 K

Cinque Terre

0

ಸಂಬಂಧಿತ ಸುದ್ದಿ