ಬೆಂಗಳೂರು: ಸ್ಯಾಂಡಲ್‌ವುಡ್ ನಟ ಕಂ ನಿರ್ದೇಶಕನನ್ನು ಲೈಂಗಿಕ ದೌರ್ಜನ್ಯದಾರೋಪದಡಿ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.
ಟಿ.ಜಿ ಹರ್ಷವರ್ಧನ್ ಅಲಿಯಾಸ್ ವಿಜಯ್ ಭಾರ್ಗವ್ ಬಂಧಿತ ನಿರ್ದೇಶಕ. ವಿಷನ್ 2023 ಚಿತ್ರದ ನಿರ್ಮಾಪಕ ಕಂ ಹೀರೋ ಆಗಿರುವ ಹರ್ಷವರ್ಧನ್, ಸಹ ನಟಿಯೊಬ್ಬರನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆಂದು ಆರೋಪಿಸಲಾಗಿದೆ. ನಟಿ ಮತ್ತು ಹರ್ಷವರ್ಧನ್ ಆರು ತಿಂಗಳನಿಂದ ಲಿವಿಂಗ್ ಟು ಗೆದರ್ ಇದ್ದರು. ಕಳೆದ ಕೆಲವು ದಿನಗಳಿಂದ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ ಎಂದು ಹೇಳಲಾಗುತ್ತಿದೆ. ಭಿನ್ನಾಭಿಪ್ರಾಯ ಹಿನ್ನೆಲೆ ಅತ್ಯಾಚಾರ ಅಂತ ದೂರು ದಾಖಲಾಗಿದೆ ಎನ್ನಲಾಗಿದೆ.
PublicNext
29/01/2022 11:21 am