ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು:ಪಬ್‌ನಲ್ಲಿ ಮಾಜಿ ಸಂಸದರ ಪುತ್ರ ಮತ್ತು ರೆಸ್ಟೋರೆಂಟ್ ಸಿಬ್ಬಂದಿ ಗಲಾಟೆ

ಬೆಂಗಳೂರು: ಊಟ ಮಾಡುವ ವಿಚಾರಕ್ಕಾಗಿ ರೆಸ್ಟೋರೆಂಟ್ ನಲ್ಲಿ ಗಲಾಟೆ ನಡೆದು ಮಾಜಿ ಸಂಸದರ ಪುತ್ರ ಹಾಗೂ ಸಿಬ್ಬಂದಿ ನಡುವೆ ಮಾರಾಮಾರಿ ನಡೆದಿದೆ. ಈ ವೇಳೆ ಮಾಜಿ ಸಂಸದರ ಪುತ್ರನ ಮೇಲೆ ಹಲ್ಲೆ ನಡೆಸಿರೋದಾಗಿ ದೂರು ದಾಖಲಾಗಿದೆ. ಈ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಧಾರವಾಡ ಕ್ಷೇತ್ರದ ಮಾಜಿ ಸಂಸದ ಮಂಜುನಾಥ್ ಪುತ್ರ ಉದ್ಯಮಿ ಚಂದ್ರಶೇಖರ್ ಕುನ್ನೂರ್ ಮೇಲೆ ಹಲ್ಲೆ ನಡೆಸಿದ ಆರೋಪ‌ ಕೇಳಿ ಬಂದಿದ್ದು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಆರೋಪಿಗಳಾದ ಚೇತನ್ ಹೆಗಡೆ ಹಾಗೂ ಪ್ರಶಾಂತ್ ರೆಡ್ಡಿ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕೋವಿಡ್ ನಿಯಮ ಉಲ್ಲಂಘಿಸಿದ ಸೂಜಿ ಕ್ಯೂ ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕರ ವಿರುದ್ಧ ಪ್ರಕರಣ‌‌ ದಾಖಲಾಗಿದೆ.

ಜನವರಿ 23 ರಂದು ರಾತ್ರಿ ಮಾಜಿ ಸಂಸದರ ಪುತ್ರ ಚಂದ್ರಶೇಖರ್ ಹಾಗೂ ಆತನ ಸ್ನೇಹಿತರೊಡನೆ ಊಟಕ್ಕಾಗಿ ಮಿರಾಜ್ ಹೋಟೆಲ್ ಹೋಗಿದ್ದರು. ಊಟ ಆರ್ಡರ್ ಮಾಡುವಾಗ ಹೊಟೇಲ್‌ ಪಕ್ಕದ ಟೇಬಲ್‌‌ ನಲ್ಲಿ ಕುಳಿತಿದ್ದ ಆರೋಪಿ ಚೇತನ್ ಹೆಗಡೆ ಈ ಹೊಟೇಲ್ ನಲ್ಲಿ ಊಟ ಮಾಡಬೇಡಿ. ನಮ್ಮ ರೆಸ್ಟೋರೆಂಟ್‌ಗೆ‌ ಬನ್ನಿ ಎಂದು ಬಲವಂತವಾಗಿ ಇಂಡಿಯನ್ ಎಕ್ಸ್ ಪ್ರೆಸ್ ಬಳಿಯಿರುವ ಸೂಜಿ ಕ್ಯೂ ಬಾರ್ ಅಂಡ್ ರೆಸ್ಟೋರೆಂಟ್ ಗೆ ಕರೆದೊಯ್ದಿದ್ದಾನೆ.

ಅಲ್ಲಿಗೆ ಹೋಗಿದ್ದ ಚಂದ್ರಶೇಖರ್ ಊಟ ಆರ್ಡರ್ ಮಾಡಿ ಊಟ ತಡವಾಗಿದಕ್ಕೆ ವಿಚಾರಿಸಿದಾಗ ಚೇತನ್ ಹೆಗಡೆ ಜೊತೆಗಿದ್ದ ಸ್ನೇಹಿತ ಪ್ರಶಾಂತ್ ರೆಡ್ಡಿ ಏಕಾಏಕಿ ಅವಾಚ್ಯ ಶಬ್ಧಗಳಿಂದ‌ ನಿಂದಿಸಿದ್ದಾನೆ. ಇದಕ್ಕೆ‌ ಪ್ರತಿರೋಧಿಸಿದ ಚಂದ್ರಶೇಖರ್ ಗೆ ಕಪಾಳಮೋಕ್ಷ ಮಾಡಿ ಬಾಟಲಿಯಿಂದ ಚುಚ್ಚುವುದಕ್ಕೆ ಮುಂದಾಗಿದ್ರು ಎಂದು ದೂರು ನೀಡಿದ್ದಾರೆ.

ಇನ್ನೂ ಚಂದ್ರಶೇಖರ್ ಕುನ್ನೂರ್ ಕೂಡ ಗಲಾಟೆ ಮಾಡಿ ರೆಸ್ಟೋರೆಂಟ್ ಮಾಲಿಕರ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ಹೇಳಲಾಗ್ತಿದೆ‌.

Edited By :
PublicNext

PublicNext

28/01/2022 01:07 pm

Cinque Terre

21.13 K

Cinque Terre

0

ಸಂಬಂಧಿತ ಸುದ್ದಿ