ಬೆಂಗಳೂರು: ಕ್ಷುಲ್ಲಕ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಮಹಿಳೆಗೆ ಮಚ್ಚಿನಿಂದ ಹಲ್ಲೆ ನಡೆದಿರುವ ಘಟನೆ ಸುಬ್ರಮಣ್ಯಪುರದ ವಸಂತಪುರದಲ್ಲಿ ನಡೆದಿದೆ.
ಅಮುದಾ ಎಂಬುವರ ಮೇಲೆ ಮಾರಣಾಂತಿಕ ಹಲ್ಲೆಯಾಗಿದ್ದು, ನೆರೆ ಮನೆಯ ವಿಜಯಲಕ್ಷ್ಮೀ, ಕುಮಾರ್, ವಿಶಾಲ್ ರಿಂದ ಕೃತ್ಯ ನಡೆದಿದೆ ಎಂದು ಆರೋಪಿಸಲಾಗಿದೆ.
ತುಳಿಸಿ ಮಂಟಪದ ಮೇಲೆ ಗೋಣಿ ಚೀಲ ಹಾಕಿದ್ದ ನೆರೆಮನೆಯವರು,ಗೋಣಿ ಚೀಲವನ್ನ ತೆಗೆಯುವುದಕ್ಕೆ ಹೇಳಿದಕ್ಕೆ ಮಹಿಳೆಗೆ ಮಚ್ಚಿನಿಂದ ಹಲ್ಲೆ ಮಾಡಿದ್ದು ,ತಲೆ ಹಾಗೂ ಭುಜಕ್ಕೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಮನೆ ಮುಂದೆ ನಿಲ್ಲಿಸಿರುವ ಬೈಕ್ ಗೆ ಬೆಂಕಿ ಹಚ್ಚೊದು ಮನೆ ಗ್ಲಾಸ್ ಗೆ ಕಲ್ಲಿನಿಂದ ಹೊಡೆದು ದಾಂದಲೆ ನಡೆಸಿದ್ದಾರೆ.ತಲೆಯಲ್ಲಿ ರಕ್ತ ಸುರಿಯುತ್ತಿದ್ರು ಸಹಾಯಕ್ಕೆ ಬಾರದ ಸ್ಥಳೀಯರು ಪೊಲೀಸರಿಗೆ ದೂರು ಕೊಟ್ಟು ಎಫ್ ಐ ಆರ್ ದಾಖಲಾದ್ರು ಆರೋಪಿಗಳನ್ನ ಬಂಧಿಸಿಲ್ಲ ಎಂದು ದೂರುದಾರರು ಆರೋಪಿಸಿದ್ದಾರೆ.
PublicNext
28/01/2022 11:48 am