ಯಲಹಂಕ: ಕೊರೊನಾ ಆತಂಕ ನಡುವೆಯೇ ಹೇಗೋ ಬದುಕು ಕಟ್ಟಿಕೊಳ್ತಿದ್ದ 160ಕ್ಕೂ ಹೆಚ್ಚು ಕಾರ್ಮಿಕರನ್ನು ಸೂಪರ್ ಮಾರ್ಕೆಟ್ ಆ್ಯಪ್ ಕಂಪನಿ ಬೀದಿಗೆ ತಳ್ಳಿದೆ! ಯಲಹಂಕದ ರಮಣಶ್ರೀ ಗಾರ್ಡನ್ಸ್ ಹಿಂಭಾಗದ ಅನಂತಪುರ ರಸ್ತೆಯ ಹೈವ್ ಲೂಪ್ ಲಾಜಿಸ್ಟಿಕ್ ಕಂಪನಿ ತಿಕ್ಕಾಟಕ್ಕೆ 160 ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ.
'ಹೈವ್ ಲೂಪ್ ಲಾಜಿಸ್ಟಿಕ್ಸ್' ಬಳಿ 'ಪಿಕ್ಲಿ-ಉಡಾನ್' ಕಂಪನಿಯೂ ಸಬ್ ಕಾಂಟ್ರಾಕ್ಟ್ ಪಡೆದು 'Super Market App' ಹೆಸರಲ್ಲಿ ಹಣ್ಣು, ತರಕಾರಿ & ಅಗತ್ಯ ವಸ್ತುಗಳನ್ನು ಬೈಕ್ ಗಳ ಮೂಲಕ ಸರ್ವಿಸ್ ಮಾಡಲಾಗುತ್ತಿತ್ತು.ಇದೀಗ ಏಕಾಏಕಿ ನಿನ್ನೆಯಿಂದ ಆಫೀಸ್ ನಲ್ಲಿ ಕೆಲಸ ಮಾಡುವ 40 ಮಂದಿ ಸೇರಿ 120ಕ್ಕೂ ಅಧಿಕ ಡೆಲಿವರಿ ಕೆಲಸಗಾರರಿಗೆ ʼನಾಳೆಯಿಂದ ಕೆಲಸಕ್ಕೆ ಬರಬೇಡಿʼ ಎಂದು ತಿಳಿಸಿದೆ.
ಇದರಿಂದ ಕಂಗಾಲಾದ ಕಾರ್ಮಿಕರು ಬೀದಿಗೆ ಬಂದು ನ್ಯಾಯಕ್ಕಾಗಿ ಯಲಹಂಕ ಉಪನಗರ ಪೊಲೀಸರ ಮೊರೆ ಹೋಗಿದ್ದಾರೆ. ಪೊಲೀಸರು ಕಂಪನಿ ಮ್ಯಾನೇಜರ್, ಹೆಚ್ ಆರ್ ಸಿಬ್ಬಂದಿಯನ್ನು ಕರೆಸಿ ಮಾತುಕತೆಯಿಂದ ಸಮಸ್ಯೆ ಬಗೆಹರಿಸಿಕೊಳ್ಳಿ. ಇಲ್ಲವಾದರೆ, ಕಾರ್ಮಿಕರ ನ್ಯಾಯಾಲಯಕ್ಕೆ ದೂರು ಸಲ್ಲಿಸಿ ಎಂದಿದ್ದಾರೆ. ಈ ಬಗ್ಗೆ ಪಿಕ್ಲಿ ಮ್ಯಾನೇಜರ್ ಯಾವುದೇ ಪ್ರತಿಕ್ರಿಯೆ, ಭರವಸೆ ನೀಡಲು ನಿರಾಕರಿಸಿದ್ದಾರೆ. ಅಂತೂ ಕೊರೊನಾ ಎಫೆಕ್ಟ್ ನ ಬಿಜಿನೆಸ್ ಲಾಸ್ ಗೆ ನೂರಾರು ಕಾರ್ಮಿಕರು ಬೀದಿಗೆ ಬಿದ್ದಿರುವುದು ದುರಂತ.
PublicNext
26/01/2022 10:37 pm