ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೆಲಮಂಗಲ: ನಶೆ ಮಾರುತ್ತಿದ್ದವರನ್ನು ಬಲೆಗೆ ಕೆಡವಿದ ಪೊಲೀಸರು

ನೆಲಮಂಗಲ: ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾದಕವಸ್ತು ಮಾರಾಟ ಮಾಡುತ್ತಿದ್ದ ಖದೀಮರನ್ನು ಪೊಲೀಸರು ಬಲೆಗೆ ಕೆಡವಿದ್ದಾರೆ. ಬಂಧಿತ ಆರೋಪಿಗಳು ಸುಮಾರು ದಿನಗಳಿಂದ ಯುವಕರನ್ನು ಪುಸಲಾಯಿಸಿ ನಶೆ ಪದಾರ್ಥ ಮಾರುತ್ತಿದ್ದರು ಎನ್ನಲಾಗಿದೆ.

ನೆಲಮಂಗಲದ ಜಾಸ್ ಟೋಲ್ ಬಳಿಯ ರಾಶಿ ಗೇಟ್ ಬಳಿ ಆರೋಪಿಗಳನ್ನು ಬಂಧಿಸಲಾಗಿದೆ. ನೈಜಿರಿಯಾದ ಮೂಲದ ಆ್ಯಂಥೋನಿ, ಶಿವಾಜಿನಗರದ ಆರಿಫ್ ಎಂಬಾತರು ಬಂಧಿತ ಆರೋಪಿಗಳು, ಆರೋಪಿಗಳಿಂದ 4.35 ಗ್ರಾಂ ಹೆರಾಯಿನ್, 8.4 ಗ್ರಾಂ ನಷ್ಟು MDMA ಕ್ರಿಸ್ಟಲ್ ಮಾದಕವಸ್ತು ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ 2 ಮೊಬೈಲ್, 2 ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Edited By : Nagaraj Tulugeri
PublicNext

PublicNext

26/01/2022 06:17 pm

Cinque Terre

18.79 K

Cinque Terre

0

ಸಂಬಂಧಿತ ಸುದ್ದಿ