ಬೆಂಗಳೂರು: ಹೈ-ಫೈ ಕಾರಿನಲ್ಲಿ ಬಂದು ಫ್ಲವರ್ ಪಾಟ್ ಕದ್ದ ಕಳ್ಳಿ. ನಿಜಕ್ಕೂ ಈ ವಿಚಾರ ಕೇಳಿದ್ರೆ ಅಚ್ಚರಿ ಅನಿಸುತ್ತದೆ ಅಲ್ವಾ. ಅಚ್ಚರಿ ಅನಿಸಿದ್ರೂ ಅದು ನಿಜ.
ಕಳ್ಳತನ ಮಾಡೋಕೆ ಚಿನ್ನ ಹಣನೇ ಬೇಕು ಎಂದು ಕಳ್ಳರಿಗೆ ರೂಲ್ಸ್ ಇರಲ್ಲ. ಸುಲಭವಾಗಿ ಏನೇ ಸಿಕ್ಕರೂ ಕಳ್ಳತನ ಮಾಡುತ್ತಾರೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ. ರಾಜಧಾನಿಯಲ್ಲಿ ಹೈ-ಪೈ ಕಾರಿನಲ್ಲಿ ಬಂದ ಮಹಿಳೆ ಮನೆ ಮುಂದಿನ ಕಾಂಪೌಂಡ್ ಮೇಲೆ ಇಟ್ಟಿದ್ದ ಫ್ಲಾವರ್ ಪಾಟ್‌ಘಲನ್ನು ಕಳ್ಳತನ ಮಾಡಿದ್ದಾಳೆ.
ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಆರ್.ಎಂ.ವಿ ಎರಡನೇ ಸ್ಟೇಜ್‌ನಲ್ಲಿ ಇದೇ ತಿಂಗಳು 24ರಂದು ಘಟನೆ ನಡೆದಿದ್ದು, ಈ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಗಿದೆ. ಈ ಸಂಬಂಧ ಮನೆ ಮಾಲೀಕರಾದ ಕಾವ್ಯ ಸೆಲ್ವಂ ಎಂಬುವರು ಬೆಂಗಳೂರು ಪೊಲೀಸರಿಗೆ ಟ್ವೀಟ್ ಮೂಲಕ ದೂರು ನೀಡಿದ್ದಾರೆ. ಇನ್ನು ಈ ಕೃತ್ಯವನ್ನು ಪರಿಚಯಸ್ಥರೇ ಮಾಡಿರುವ ಅನುಮಾನ ಕೂಡ ವ್ಯಕ್ತವಾಗುತ್ತಿದೆ.
PublicNext
26/01/2022 12:07 pm