ಬೆಂಗಳೂರು : ಅವನ ಸಾಂಸಾರಿಕ ಜೀವನ ಚೆನ್ನಾಗಿಲ್ಲ ಅಂತ ಇನ್ನೊಂದು ಮದುವೆಯಾಗಿದ್ದ. ಆದ್ರೆ ಅಲ್ಲೂ ನಮ್ಮದಿ ಸಿಗದೇ ಆತ್ಮಹತ್ಯೆಗೆ ಶರಣಾದ ಘಟನೆ ಬಸವೇಶ್ವರ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹೌದು ಈ ನತದೃಷ್ಟ ವ್ಯಕ್ತಿ ,ಹೆಸರು ಚಾಂದ್ ಪಾಷಾ ಕಳೆದ ರಾತ್ರಿನೇಣಿಗೆ ಶರಣಾದ ವ್ಯಕ್ತಿ. ಗ್ಯಾರೇಜ್ ಒಂದರಲ್ಲಿ ಮೆಕಾನಿಕ್ ಆಗಿದ್ದ ಈತ ಕೆಲ ವರ್ಷಗಳ ಹಿಂದೆ ಮದುವೆಯಾಗಿದ್ದ. ಆದ್ರೆ ಸಾಂಸಾರಿಕ ಜೀವನ ಸರಿ ಹೋಗಲಿಲ್ಲ ಅಂತ ಆಕೆಗೆ ವಿಚ್ಚೇದನ ನೀಡಿ ಕಳೆದ ನಾಲ್ಕು ತಿಂಗಳ ಹಿಂದಷ್ಟೆ ಇನ್ನೊಂದು ಮದುವೆಯಾಗಿದ್ದ. ಆಕೆಯೂ ಮೊದಲ ಮದುವೆ ಸರಿ ಬಂದಿಲ್ಲ ಅಂತ ಚಾಂದ್ ಪಾಷಾನನ್ನ ಎರಡನೇ ವಿವಾಹವಾಗಿದ್ದಳು.
ಆದ್ರೆ ಎರಡನೇ ಬಾರಿಗೆ ಇಬ್ಬರು ದಾಂಪತ್ಯಕ್ಕೆ ಕಾಲಿಟ್ಟಿದ್ದರು ಇಬ್ಬರ ನಡುವೆ ಸಂಸಾರ ದೋಣಿ ಸರಿಯಾಗಿ ಸಾಗುತ್ತಿರಲಿಲ್ಲ. ಹೀಗಾಗಿ ನಿತ್ಯ ಗಂಡ ಹೆಂಡತಿ ನಡುವೆ ಜಗಳವಾಗುತ್ತಿತ್ತು. ಇದ್ರಿಂದ ಬೇಸತ್ತ ಚಾಂದ್ ಪಾಷಾ ಕಳೆದ ರಾತ್ರಿ ತನ್ನ ಮನೆಯಲ್ಲೆ ನೇಣಿಗೆ ಶರಣಾಗಿದ್ದಾನೆ.
ಸದ್ಯ ಆತ್ಮಹತ್ಯೆ ಕುರಿತು ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
PublicNext
25/01/2022 04:48 pm