ಯಲಹಂಕ: ಅಕ್ಕನ ಗಂಡ ಅನ್ನೋ ಕಾರಣಕ್ಕೆ ಪ್ರೀತಿಯಿಂದ ಮಾತಾಡಿಸಿದ್ದೇ ತಪ್ಪಾಯ್ತಾ!? ನಾದಿನಿ ಅನ್ನೋದನ್ನು ಮರೆತ ಭಾವ, ಹೆಂಡತಿ ಜೊತೆಗೆ ಆಕೆಯ ತಂಗಿನೂ ಬೇಕು ಅಂತ ದುಸ್ಸಾಹಸಕ್ಕೆ ಕೈಹಾಕಿದ್ದ. ಮಾಡಿದ ತಪ್ಪಿಗೆ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಬೈಕ್ ನಲ್ಲಿ ಹೋಗ್ತಿದ್ದ ಯುವತಿನ ಅಡ್ಡಗಟ್ಟಿದ ಕಾರು. ನೋಡ್ತಾ ಇದ್ದಂತೆ ಕಾರಿನಿಂದಿಳಿದ ವ್ಯಕ್ತಿ ಯುವತಿಯ ಅಟ್ಟಾಡಿಸಿ ನಡುರಸ್ತೆಲೇ ಬಲವಂತವಾಗಿ ಕಾರಿಗೆ ಹಾಕ್ಕೊಂಡು ಎಸ್ಕೇಪ್. ಈ ದೃಶ್ಯ ನೋಡಿದವರಿಗೆ ಅರೆಕ್ಷಣ ಶಾಕ್! ಈ ದೃಶ್ಯ ಕಂಡ ಸ್ಥಳೀಯರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಅಷ್ಟರಲ್ಲಿ ಯುವತಿ ಪೋಷಕರು ʼನಮ್ಮ ಮಗಳು ಮನೆಗೆ ಬಂದಿಲ್ಲʼ ಅಂತ ದೂರು ನೀಡಿದ್ದರು. ಆ ಕೇಸ್ ನ ಬೆನ್ನತ್ತಿದ ಪೊಲೀಸರಿಗೆ ಆಮೇಲೆ ಗೊತ್ತಾಗಿದ್ದೇ ಈ ಭಾವನ ಒನ್ ಸೈಡ್ ಲವ್.
ಈತ ದೇವರಾಜ್, ತುಮಕೂರು ಮೂಲದವ. ಈತನಿಗೆ ಬೆಂಗಳೂರಿನ ಕೊಡಿಗೇಹಳ್ಳಿಯ ಮಹಿಳೆ ಜೊತೆ ಮದುವೆ ಮಾಡಿಕೊಡಲಾಗಿತ್ತು. ಅಕ್ಕನನ್ನು ನೋಡೋಕೆ ಮನೆಗೆ ಬರ್ತಿದ್ದ ನಾದಿನಿ ಕಂಡರೆ ಭಾವ ದೇವರಾಜ್‌ಗೆ ಒಂಥರಾ ಪ್ರೀತಿ. ನಾದಿನಿ ಬಳಿ ತನ್ನ ಪ್ರೀತಿ ನಿವೇದಿಸಿದ್ದ ಕೂಡ. ಆದರೆ, ಆಕೆ ಪ್ರಪೋಸಲ್ ನೆಗ್ಲೆಕ್ಟ್ ಮಾಡಿ ಬೆಂಗಳೂರಿಗೆ ಬಂದಿದ್ದಳು. ಅಷ್ಟಕ್ಕೆ ಸುಮ್ಮನಾಗದ ದೇವರಾಜ್, ನಾದಿನಿಯನ್ನು ಪಡೆಯಲೇ ಬೇಕೆಂದು, ತನ್ನಿಬ್ಬರು ಸ್ನೇಹಿತರೊಂದಿಗೆ ಕಳೆದ ಶನಿವಾರ ಸಂಜೆ ಕೊಡಿಗೇಹಳ್ಳಿಗೆ ಬಂದಿದ್ದ. ನಾದಿನಿ ಕೆಲಸ ಮುಗಿಸಿ ಮನೆಗೆ ಹೋಗೋದನ್ನೇ ಕಾಯ್ತಿದ್ದ ಭಾವ & ಟೀಂ, ಬೈಕ್ ನ್ನು ಅಡ್ಡಗಟ್ಟಿ ನಾದಿನಿಯನ್ನು ಕಿಡ್ನ್ಯಾಪ್ ಮಾಡಿ ಎಸ್ಕೇಪ್ ಆಗಿದ್ದರು!
ಪ್ರಕರಣದ ಬೆನ್ನು ಬಿದ್ದ ಪೊಲೀಸರಿಗೆ ಯುವತಿಯನ್ನು ಕಿಡ್ನ್ಯಾಪ್ ಮಾಡಿ ಸಕಲೇಶಪುರ ತೋಟದ ಮನೆಯಲ್ಲಿ ಇಟ್ಟಿರೋ ವಿಚಾರ ತಿಳಿಯಿತು. ತಕ್ಷಣ ಪೊಲೀಸರು ಕಾರ್ಯಾಚರಣೆ ನಡೆಸಿ, ನಾದಿನಿಯನ್ನು ರಕ್ಷಿಸಿ, ʼಭಾವಾಸುರʼ ದೇವರಾಜ್, ಸಂಗಡಿಗರಾದ ನವೀನ್, ಕುಮಾರ್ ನನ್ನು ಬಂಧಿಸಿ, ಪರಪ್ಪನ ಅಗ್ರಹಾರಕ್ಕೆ ಅಟ್ಟಿದ್ದಾರೆ.
PublicNext
25/01/2022 01:32 pm