ಬೆಂಗಳೂರು:ಪರಪ್ಪನ ಅಗ್ರಹಾರದ ಮತ್ತೊಂದು ಕರ್ಮಕಾಂಡ ಬಯಲಾಗಿದೆ.ಹೌದು ಜೈಲು ಸಿಬ್ಬಂದಿಗೆ ಜೀ ಹುಜೂರ್ ಅಂತಿದ್ದ ಕೈದಿ, ಹಣಪಡೆಯುತ್ತಿದ್ದ ಸಿಬ್ಬಂದಿಯ ಸ್ಟಿಂಗ್ ಮಾಡಿ ಸಿಬ್ಬಂದಿ ಅಕ್ರಮವನ್ನ ಬಯಲಿಗೆಳೆದಿದ್ದಾನೆ.
Yes ಇದು ಸ್ಟಿಂಗ್ ನಾರಾಯಣ ,@ ಜೆಸಿಬಿ ನಾರಾಯಣನ ಮೊಬೈಲ್ ನಲ್ಲಿ ಸೆರೆಯಾದ ಸ್ಟಿಂಗ್ .ಈತ ಜೈಲಲ್ಲಿದ್ರೆ ರಾಜನಿಗಿಂತ ಹೆಚ್ಚು ಮರ್ಯಾದೆ. ತನ್ನ ಸೆಲ್ಲಿಗೆ ಎಲ್ಲವನ್ನೂ ಸಪ್ಲೈ ಮಾಡಿಸ್ಕೊತಾನೆ ಈ ರೌಡಿ ಶೀಟರ್ ನಾರಾಯಣ.ಜೈಲು ಸಿಬ್ಬಂದಿಯೇ ಮುಂದೆ ನಿಂತು ಎಲ್ಲವನ್ನೂ ಸಪ್ಲೈ ಮಾಡ್ತಿದ್ದಾರೆ. ಟಿವಿ , ಮೊಬೈಲ್ಸ್ , ಮಂಚ, ಸೋಫಾ ಏನಿಲ್ಲ ಹೇಳಿ. ಎಲ್ಲವೂ ಕೂಡ ಜೆಸಿಬಿ ಇದ್ದಲ್ಲಿಯೇ ಬಂದು ಬೀಳುತ್ತೆ.
ಇಲ್ಲಿ ಎಲ್ಲವೂ ಖುಲ್ಲಂ ಖುಲ್ಲಾ:
ಇದೇನು ಸೆರೆಮನೆಯಾ ಇಲ್ಲಾ ಮಾವನ ಮನೆಯಾ ಅನ್ನೋ ಅನುಮಾನ ಹುಟ್ಟಿಸುತ್ತದೆ. ಹಣ ಒಂದಿದ್ರೆ ಇಲ್ಲಿ ಏನ್ ಬೇಕಾದ್ರು ಸಪ್ಲೈ ಆಗುತ್ತೆ ಅನ್ನೋದಕ್ಕೆ ಈ ವಿಡಿಯೋ ಸಾಕ್ಷಿ. ಖತರ್ನಾಕ್ ರೌಡಿ ಜೆಸಿಬಿ ನಾರಾಯಣನ ಅಡ್ಡೆಯಾಗಿ ಬಿಟ್ಟಿದೆ ಈ ಜೈಲು.ವಾರಕ್ಕಿಷ್ಟು ಅನ್ನೋದು ಇಲ್ಲಿಯ ವ್ಯವಹಾರ, ಈ ವ್ಯವಹಾರದ ಚಿತ್ರಣ ಎಲ್ಲವೂ ಸದ್ಯ ಓಪನ್ ಸಿಕ್ರೆಟ್.
PublicNext
25/01/2022 12:44 pm