ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಹಣದಾಸೆಗೆ ಜಿಂಕೆ ಕೊಂಬು ಮಾರಾಟ ಮಾಡ್ತಿದ್ದ ಆರೋಪಿ ಬಂಧನ

ಬೆಂಗಳೂರು: ವಿಲ್ಸನ್ ಗಾರ್ಡನ್ ಪೊಲೀಸರು ಅಪರೂಪ ಜಾತಿಯ ಜಿಂಕೆ ಕೊಂಬು ಮಾರಾಟ ಮಾಡುತ್ತಿದ್ದ ಆರೋಪಿಯನ್ನ ಬಂಧಿಸಿದ್ದಾರೆ.

ತಮಿಳುನಾಡು ಮೂಲದ ನರಸಿಂಹಪ್ಪ (60) ಬಂಧಿತ ಆರೋಪಿ ಆರೋಪಿಯಾಗಿದ್ದು, ಬಂಧಿತನಿಂದ 9 ಜಿಂಕೆ ಕೊಂಬುಗಳನ್ನ ವಶಕ್ಕೆ ಪಡೆಯಲಾಗಿದೆ.

ತಮಿಳುನಾಡಿನ ಕಾಮನದೊಡ್ಡಿಯಿಂದ ಜಿಂಕೆ ಕೊಂಬುಗಳನ್ನ ತಂದಿದ್ದ ಆರೋಪಿ, ವಿಲ್ಸನ್ ಗಾರ್ಡನ್ ಠಾಣಾ ವ್ಯಾಪ್ತಿಯಲ್ಲಿ ಕೊಂಬು ಮಾರಾಟಕ್ಕೆ ಯತ್ನಿಸುತ್ತಿದ್ದ. ಈ ವೇಳೆ ಖಚಿತ ಮಾಹಿತಿ ಆಧರಿಸಿ ಆರೋಪಿಯನ್ನ ಬಂಧಿಸಿದ ಪೊಲೀಸರು ಆರೋಪಿಯನ್ನು ಜೈಲಿಗೆ ಕಳುಹಿಸಿದ್ದಾರೆ.

Edited By :
Kshetra Samachara

Kshetra Samachara

25/01/2022 12:42 pm

Cinque Terre

564

Cinque Terre

0

ಸಂಬಂಧಿತ ಸುದ್ದಿ