ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಲೇಜ್ ಬಳಿ ಡ್ರಗ್ಸ್ ಮಾರಾಟ : ವಿದೇಶಿ ಪ್ರಜೆ ಬಂಧನ

ಯಲಹಂಕ : ವಿದ್ಯಾಭ್ಯಾಸ, ವ್ಯಾಪಾರ, ಮೆಡಿಕಲ್ ವೀಸಾಗಳ ಮೂಲಕ ಭಾರತಕ್ಕೆ ಬರುವ ಆಫ್ರಿಕಾ ಮೂಲದ ಪ್ರಜೆಗಳು ಅಕ್ರಮ ಚಟುವಟಿಕೆಗಳಲ್ಲಿ ತೊಡಗುತ್ತಿದ್ದಾರೆ. ನಗರ ಮತ್ತು ನಗರದ ಹೊರವಲಯಗಳ ಪ್ರಮುಖ ಕಾಲೇಜುಗಳನ್ನೇ ವಿದೇಶಿ ಡ್ರಗ್ ಪೆಡ್ಲ ರ್ಸ್ ಗಳು ಅಡ್ಡೆಗಳಾಗಿಸಿಕೊಂಡಿದ್ದಾರೆ.

ಇದೀಗ ಯಲಹಂಕದ ಪ್ರತಿಷ್ಠಿತ ಕಾಲೇಜು ಬಳಿ ಡ್ರಗ್ ಮಾರಾಟಕ್ಕೆ ಯತ್ನಿಸುತ್ತಿದ್ದ ವಿದೇಶಿ ಪ್ರಜೆಯನ್ನು ದೊಡ್ಡಬಳ್ಳಾಪುರದ ಡ್ರಗ್ಸ್ ನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ.ರಾಜಾನುಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ಇಟಗಲ್ಪುರದ ಪ್ರೆಸಿಡೆನ್ಸಿ ಕಾಲೇಜು ಬಳಿ ನೈಜೀರಿಯಾ ಮೂಲದ ವನೂಕ್ ಅಕ್ಬೂಯ್ ಡ್ರಗ್ಸ್ ಮಾರಾಟ ಮಾಡ್ತಿದ್ದ.

ಡ್ರಗ್ಸ್ ಖರೀದಿಸುವ ನೆಪದಲ್ಲಿ ದೊಡ್ಡಬಳ್ಳಾಪುರದ ಡ್ರಗ್ಸ್ ನಿಗ್ರಹ ದಳದ ಸಿಬ್ಬಂದಿ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ ಲಕ್ಷಾಂತರ ಬೆಲೆಯ 15MDM ಮಾತ್ರೆ, ಕೋಕೆನ್, ಕ್ರಿಸ್ಟಲ್ ಮಿಥ್, LST ಸ್ಟಾಂಪ್ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ. ವನೂಕ್ ಪ್ರತಿಷ್ಟಿತ ಕಾಲೇಜಿನ ವಿದ್ಯಾರ್ಥಿಗಳನ್ನ ಟಾರ್ಗೆಟ್ ಮಾಡಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.

ಮೆಡಿಕಲ್ ವೀಸಾ ಮೇಲೆ ಬೆಂಗಳೂರಿಗೆ ಬಂದಿದ್ದ ಆಸಾಮಿ ಗುಂಪು ಕಟ್ಟಿಕೊಂಡು ಈ ರೀತಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ. ಇನ್ನು ಡ್ರಗ್ಸ್ ಜಾಲದ ಕಿಂಗ್ ಫಿನ್ ಗಾಗಿ ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ ಉಪವಿಭಾಗದ ಮಾದಕ ದ್ರವ್ಯ ನಿಗ್ರಹ ವಿಶೇಷ ದಳದಿಂದ ತನಿಖೆ ಮುಂದುವರೆದಿದೆ.

Edited By : Nirmala Aralikatti
Kshetra Samachara

Kshetra Samachara

23/01/2022 03:05 pm

Cinque Terre

232

Cinque Terre

0

ಸಂಬಂಧಿತ ಸುದ್ದಿ