ಬೆಂಗಳೂರು: ಗಮನ ಬೇರೆಡೆಗೆ ಸೆಳೆದು ಕಳವು ಮಾಡುತಿದ್ದ ಕುಖ್ಯಾತ ದರೋಡೆಕೋರರನ್ನು ಬಂಧಿಸುವಲ್ಲಿ ಕೊತ್ತನೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಓ ಜಿ ಕುಪಂ ಗ್ಯಾಂಗ್ ನ ಇಬ್ಬರು ಕಳ್ಳರು ಗಿರಿಕುಮಾರ್, ಷನ್ಮುಕಗಂ ಬಂಧಿತ ಆರೋಪಿ ಕೊತ್ತನೂರು, ಅಂಮೃತಹಳ್ಳಿ, ಯಲಹಂಕ, ಮಾರತ್ತಹಳ್ಳಿ ಸೇರಿ ಹಲವು ಠಾಣೆ ವ್ಯಾಪ್ತಿಯಲ್ಲಿ ದರೋಡೆ ಮಾಡಿದ್ದ ಈ ಆರೋಪಿಗಳ ವಿರುದ್ಧ ಬೆಂಗಳೂರು ಕೋಲಾರ ವ್ಯಾಪ್ತಿಯಲ್ಲಿ 7 ಪ್ರಕರಣಗಳು ದಾಖಲಾಗಿದ್ದವು.
ಬ್ಯಾಂಕ್ ಬಳಿ ಹೊಂಚು ಹಾಕಿ ಕಾದು ಹಣ ಡ್ರಾ ಮಾಡಿಕೊಂಡು ಬರುವವರನ್ನು ಹಿಂಬಾಲಿಸಿ ಕ್ಷಣಾರ್ಧದಲ್ಲಿ ದರೋಡೆ ಮಾಡುತಿದ್ದ ಗ್ಯಾಂಗ್ ಇತ್ತಿಚೆಗೆ ಮನೆ ಕೆಲಸ ಮಾಡಿಸಲು ಬ್ಯಾಂಕ್ ನಿಂದ ನಾಲ್ಕು ಲಕ್ಷ ಡ್ರಾ ಮಾಡಿ ಬರುತಿದ್ದವನನ್ನ ಹಿಂಬಾಲಿಸಿ ದರೋಡೆ ಮಾಡಿದ್ದರು. ಇನ್ನು ಆರೋಪಿಗಳ ವಿರುದ್ಧ ಕೊತ್ತನೂರು ಠಾಣೆ ವ್ಯಾಪ್ತಿಯಲ್ಲಿ ಬ್ಯಾಕ್ ಟೂ ಬ್ಯಾಕ್ ಮೂರು ಪ್ರಕರಣ ದಾಖಲಾದ ಬೆನ್ನಲ್ಲೇ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿ ಕಾಯುತ್ತಿದ್ದರು.
ಸದ್ಯ ಇಂದ್ರನಗರದಲ್ಲಿ ದರೋಡೆಗೆ ಹೊಂಚು ಹಾಕಿ ಬ್ಯಾಂಕ್ ಮುಂದೆ ಕಾಯುತ್ತಿದ್ದ ಗ್ಯಾಂಗ್ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಇಬ್ಬರೂ ಆರೋಪಿಗಳ ಬಂಧಿಸಿ ಜೈಲಿಗಟ್ಟಿದ್ದಾರೆ.
PublicNext
23/01/2022 10:20 am