ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೇಗ ಹಣ ಮಾಡಲು ಗಾಂಜಾ ಮಾರಾಟಕ್ಕೆ ಯತ್ನ: ಸಿಕ್ಕಿ ಬಿದ್ದ ಇಬ್ಬರು ವ್ಯಸನಿಗಳು

ದೊಡ್ಡಬಳ್ಳಾಪುರ: ಬೇಗ ಹಣ ಸಂಪಾದಿಸಲು ಅಡ್ಡದಾರಿ ಹಿಡಿದ ಇಬ್ಬರು ಗಾಂಜಾ ವ್ಯಸನಿಗಳು ಲಾರಿ ಡ್ರೈವರ್‌ಗಳಿಗೆ ಗಾಂಜಾ ಮಾರಾಟ ಮಾಡುವ ಯತ್ನದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಾರೆ.

ಸುರೇಂದ್ರ (30) ಪವನ್ ಕುಮಾರ್ (19) ಆರೋಪಿಗಳನ್ನ ವಶಕ್ಕೆ ಪಡೆಯಲಾಗಿದ್ದು, ಬಂಧಿತ ಆರೋಪಿಗಳಿಂದ 1 ಕೆಜಿ 800 ಗ್ರಾಂ ಮತ್ತು 1 ಕೆಜಿ 300 ತೂಕದ ಎರಡು ಗಾಂಜಾ ಚೀಲಗಳನ್ನ ವಶಕ್ಕೆ ಪಡೆಯಲಾಗಿದೆ.

ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಟಾಫೇ ಫ್ಯಾಕ್ಟರಿ ಬಳಿ ಇಬ್ಬರು ಗಾಂಜಾ ಮಾರಾಟ ಮಾಡುವ ಸುಳಿವು ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಖಚಿತ ಮಾಹಿತಿ ಮೇರೆಗೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಇನ್ಸ್ ಪೆಕ್ಟರ್ ಸತೀತ್ ಬಿ.ಎಸ್ ನೇತೃತ್ವದಲ್ಲಿ ದಾಳಿ ಮಾಡಿ, ಇಬ್ಬರು ಆರೋಪಿಗಳನ್ನ ಬಂಧಿಸಲಾಗಿದೆ.

ಬಂಧಿತ ಆರೋಪಿಗಳು ಸ್ವತಹ ಗಾಂಜಾ ವ್ಯಸನಿಗಳಾಗಿದ್ದು, ಬೇಗ ಹಣ ಮಾಡುವ ಕಾರಣಕ್ಕೆ ಗಾಂಜಾ ಮಾರಾಟ ಮಾಡುವ ಯತ್ನಕ್ಕೆ ಹಾಕಿದ್ರು. ಕೈಗಾರಿಕಾ ಪ್ರದೇಶಕ್ಕೆ ಬರುವ ಲಾರಿ ಡ್ರೈವರ್ ಮತ್ತು ಯುವಕರಿಗೆ ಗಾಂಜಾ ಮಾರಾಟ ಮಾಡಲು ಗಾಂಜಾ ತಂದಿದ್ದ ಸಮಯದಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By :
Kshetra Samachara

Kshetra Samachara

22/01/2022 12:23 pm

Cinque Terre

428

Cinque Terre

0

ಸಂಬಂಧಿತ ಸುದ್ದಿ