ಬೆಂಗಳೂರು: ಆಟೋ ಚಾಲಕ ಮತ್ತು ರ‍್ಯಾಪಿಡೋ ಬೈಕ್ ಸವಾರರ ನಡುವೆ ಬಾಡಿಗೆ ವಿಚಾರಕ್ಕೆ ಜಟಾಪಟಿ ನಡೆದಿದೆ.ರ‍್ಯಾಪಿಡೋ ಬೈಕ್ ನಲ್ಲಿ ಕಡಿಮೆ ಬಾಡಿಗೆಗೆ ಸೇವೆ ನೀಡಲಾಗುತ್ತಿದೆ ಹಾಗೂ ವೈಟ್ ಬೋರ್ಡ್ ನಲ್ಲಿ ಕಮರ್ಶಿಯಲ್ ಸೇವೆ ನೀಡಿ ಕಾನೂನು ಉಲ್ಲಂಘನೆ ಮಾಡುತ್ತಿದ್ದಾರೆ. ಆಟೋಗೆ ಟ್ಯಾಕ್ಸ್ ಕಟ್ಟಿ ಎಲ್ಲೋ ಬೋರ್ಡ್ ಹಾಕಿ ಚಾಲನೆ ಮಾಡುತ್ತಿದ್ದೇವೆ ಆದರೆ ಬೈಕ್ ಚಾಲಕರು ಕಡಿಮೆ ದರಕ್ಕೆ ಪ್ರಯಾಣಿಕರನ್ನು ಸೆಳೆದು ನಮ್ಮ ಹೊಟ್ಟೆಗೆ ಹೊಡೆಯುತ್ತಿದ್ದಾರೆ ಎಂದು ಆಟೋ ಚಾಲಕ ಆಕ್ರೋಶಿತಗೊಂಡಿದ್ದಾನೆ.
ರ‍್ಯಾಪಿಡೋ ಬೈಕ್ ಆ್ಯಪ್ ನಲ್ಲಿ ನಮಗೆ ವೈಟ್ ಬೋರ್ಡ್ ಅವಕಾಶ ನೀಡಿದ್ದಾರೆ ಅದ್ದರಿಂದ ನಾವು ಕೆಲಸ ಮಾಡುತ್ತಿದ್ದೇವೆ, ಅವರಿಗೆ ಸಮಸ್ಯೆ ಇದ್ದಲ್ಲಿ ರ‍್ಯಾಪಿಡೋ ಬೈಕ್ ವಿರುದ್ದ ದೂರು ನೀಡಲಿ ಎಂಬುದು ರ‍್ಯಾಪಿಡೋ ಬೈಕ್ ಸವಾರನ ವಾದ. ಸದ್ಯ ಇಬ್ಬರನ್ನೂ ಕಬ್ಬನ್ ಪಾರ್ಕ್ ಟ್ರಾಫಿಕ್ ಠಾಣೆಗೆ ಪೊಲೀಸರು ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ.
Kshetra Samachara
20/01/2022 01:10 pm