ದೇವನಹಳ್ಳಿ: ಪ್ರೀತಿ ಕುರುಡು ಅಂತಾರೆ. ಈ ಪ್ರೀತಿ-ಪ್ರೇಮಕ್ಕೆ ಜಾತಿ-ಮತ ಬೇಧ, ವಯಸ್ಸಿನ ಅಂತರ ಇರುವುದಿಲ್ಲ. ಕುಟುಂಬ- ಘನತೆ ಗೌರವ ಯಾವುದೂ ಲೆಕ್ಕಕ್ಕೆ ಬರುವುದಿಲ್ಲ. ಹೌದು, ಇಂತಹ ಪ್ರೇಮ ಪಾಶಕ್ಕೆ ಬಿದ್ದ ʼವಿವಾಹಿತ ಗೃಹಿಣಿ ಮತ್ತು ಅವಿವಾಹಿತ ಕ್ಯಾಬ್ ಚಾಲಕʼ ಕುಟುಂಬಗಳ ಘನತೆ- ಗೌರವಕ್ಕೆ ಅಂಜಿಯೇ ಒಂದೇ ಕುಣಿಕೆಗೆ ಕೊರಳೊಡ್ಡಿದ್ದರು!
23 ವರ್ಷದ ಬಸವರಾಜು ಮೂಲತಃ ರಾಯಚೂರಿನವ. ಹಾಗೆಯೇ 26 ವರ್ಷದ ಜ್ಯೋತಿ, ಈಕೆಯೂ ರಾಯಚೂರು ಮೂಲದವಳೇ. ಆರು ವರ್ಷಗಳ ಹಿಂದೆ ಇದೇ ಜ್ಯೋತಿಗೆ ಗುಲ್ವರ್ಗ ಮೂಲದ ರಾಮು ಎಂಬವರ ಜೊತೆಗೆ ಹಿರಿಯರ ಸಮಕ್ಷಮದಲ್ಲಿ ಮದುವೆಯಾಗಿತ್ತು. ಆದರೆ, ದಂಪತಿಗೆ ಮಕ್ಕಳಾಗಿರಲಿಲ್ಲ. ರಾಮು ಖಾಸಗಿ ಕಂಪನಿ ಉದ್ಯೋಗಿ. ಇತ್ತೀಚೆಗೆ ಕ್ಯಾಬ್ ಚಾಲಕ ಬಸವರಾಜು ರಾಮುನನ್ನು ಪರಿಚಯ ಮಾಡಿಕೊಂಡು ಮನೆಗೆ ಹೋಗಿ- ಬರುವುದನ್ನು ಮಾಡ್ತಿದ್ದ.
ಒಂದು ತಿಂಗಳಿಂದ ಬಸವರಾಜು ಮತ್ತು ಜ್ಯೋತಿ ನಡುವೆ ಒಡನಾಟ ಹೆಚ್ಚಾಗಿತ್ತು. ರಾಮುವಿನಿಂದ ಮಕ್ಕಳಿಲ್ಲದ ಜ್ಯೋತಿ ಬಸವರಾಜುಗೆ ಹತ್ತಿರವಾಗಿ, ಅದೂ ಮನೆ ಬಿಟ್ಟು ಬಸವರಾಜು ಜೊತೆ ಹೋಗಲು ಪ್ರೇರೇಪಿಸಿ 15 ದಿನಗಳ ಹಿಂದೆ ಮನೆಬಿಟ್ಟು ಹೋಗಿದ್ದಳು. ಬಸವರಾಜು ಮತ್ತು ಜ್ಯೋತಿ ʼಗಂಡ- ಹೆಂಡತಿʼ ಎಂದೇಳಿ ದೇವನಹಳ್ಳಿಯ ಪ್ರಶಾಂತನಗರದಲ್ಲಿ ಬಾಡಿಗೆ ಮನೆ ಮಾಡಿದ್ದರು. ಈ ವಿಷಯ ಜ್ಯೋತಿಯ ಗಂಡ ರಾಮುಗೆ ಗೊತ್ತಾಗಿ, ದೊಡ್ಡ ಜಗಳವೂ ಆಗಿತ್ತು. ಕೊನೆಗೆ ಮಾತುಕತೆಯಾಗಿ ಎರಡೂ ಕುಟುಂಬ ಇವರಿಬ್ಬರು ಬೇರೆಯಾಗಲು ಒಪ್ಪಿದ್ದರು.
ರಾಮು ಮತ್ತು ಜ್ಯೋತಿ ಬೇರೆಯಾಗಲು ಒಪ್ಪಿದ್ದ ಜ್ಯೋತಿ ಕುಟುಂಬವು ಜ್ಯೋತಿ ಬಸವರಾಜು ಜೊತೆ ಹೋಗಲು ಒಪ್ಪಿರಲಿಲ್ಲ. ಇದರಿಂದ ಬಸವರಾಜು ಮತ್ತು ಜ್ಯೋತಿ ಮಧ್ಯೆ ಮನಸ್ತಾಪವಾಗಿ, ಜಗಳವೂ ಆಗಿತ್ತು ಎನ್ನಲಾಗಿದೆ. ಈ ಅನೈತಿಕ ಪ್ರೀತಿಗೆ ಒಪ್ಪದಿದ್ದಕ್ಕೆ ಇವರಿಬ್ಬರ ಆತ್ಮಹತ್ಯೆಗೆ ಕಾರಣ ಆಗಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಪ್ರೀತಿಯ ಬಲೆಗೆ ಬಿದ್ದ ಯುವಕ ಮತ್ತು ಗೃಹಿಣಿ ಪ್ರೀತಿಯಲ್ಲಿ ಒಂದಾಗಿ, ಒಂದೇ ನೇಣಿನ ಕುಣಿಕೆಗೆ ಕೊರಳೊಡ್ಡಿರುವುದು ದುರಂತ ಅಂತ್ಯ.
PublicNext
19/01/2022 09:29 pm