ಬೆಂಗಳೂರು: ಮೊನ್ನೆ ವೀಕ್ ಎಂಡ್ ನಲ್ಲಿ ರಾಹುಲ್ @ ಸ್ಟಾರ್ ರಾಹುಲ್ ನ ಕಾಲಿಗೆ ಗುಂಡು ಹೊಡೆದು ಪೊಲೀಸ್ರು ಬಂಧಿಸಿದ್ರು. ಗಾಂಜಾ ಮಾರಾಟವನ್ನೇ ಫುಲ್ ಟೈಂ ಬ್ಯುಸಿನೆಸ್ ಮಾಡಿಕೊಂಡು ಡಕಾಯಿತಿ, ರಾಬರಿ, ಕೊಲೆ ಯತ್ನ ಕೇಸ್ ಪಾರ್ಟ್ ಟೈಂನಲ್ಲಿ ಮಾಡ್ತಿದ್ದ ರಾಹುಲ್ ಪೊಲೀಸ್ರ ಗುಂಡೇಟು ತಿಂದು ಜೈಲೂ ಸೇರಿದ್ದಾನೆ.
ತಮ್ಮ ಗುರು ಜೈಲು ಸೇರಿದ್ದಾನೆ ಅಂತ ಆತನ ಶಿಷ್ಯಂದಿರು ಮತ್ತು ಆಪ್ತರೇನೂ ಊರು ಬಿಟ್ಟಿಲ್ಲ. ಬದಲಿಗೆ ಗೆಳೆಯನಿಗೆ ಬೇಲ್ ಕೊಡಿಸಲು ಹಣ ಹೊಂದಿಸ್ತಿದ್ದಾರೆ! ಅದು ಕೂಡ ಗಾಂಜಾ ಮಾರಾಟ ಮಾಡಿ. ರಾಹುಲ್ ಅರೆಸ್ಟ್ ಆಗಿ ಒಂದೇ ದಿನಕ್ಕೆ ಗಾಂಜಾ ಮಾರಾಟ ಮಾಡ್ತಿದ್ದ ರಾಹುಲ್‌ಗೆ ಗುರು ಕುಳ್ಳ ರಿಜ್ವಾನ್ ಹಾಗೂ ಶಿಷ್ಯಂದಿರು, ಸದ್ಯ ರಿಜ್ವಾನ್ ಶಿಷ್ಯರಾದ ಕಿರಣ್, ಮಂಜು, ಕಾರ್ತಿಕ್ ಮತ್ತು ಅರ್ಜುನ್ ಗಾಂಜಾ ಮಾರಾಟ ಮಾಡ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.
ಪೊಲೀಸ್ರ ದಾಳಿ ವೇಳೆ ಕುಳ್ಳ ರಿಜ್ವಾನ್ ಮತ್ತು ಗುಡ್ಡೆ ಭರತ ತಲೆ ಮರೆಸಿಕೊಂಡಿದ್ದಾರೆ. ನಗರದ ಕೆ.ಆರ್. ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುವಾಗ ಆರೋಪಿಗಳ ಮೇಲೆ ದಾಳಿ ಮಾಡಿದ ಇನ್ಸ್ಪೆಕ್ಟರ್ ಕಿರಣ್ ಕುಮಾರ್ ಆಂಡ್ ಟೀಂ 20 ಕೆಜಿ ಗಾಂಜಾ, ಒಂದು ಕಾರು ಒಂದು ಲಾಂಗ್ ನ ಸೀಜ್ ಮಾಡಿದ್ದಾರೆ. ಆಂಧ್ರದಿಂದ ಕುಳ್ಳ ರಿಜ್ವಾನ್, ಗುಡ್ಡೆ ಭರತ ಗಾಂಜಾ ತರಿಸಿದ್ರು ಎನ್ನುವ ಮಾಹಿತಿ ದೊರೆತಿದ್ದು ಆ ಬಗ್ಗೆ ತನಿಖೆ ಮುಂದುವರಿದಿದೆ. ಈ ಬಗ್ಗೆ ಐವರ ವಿರುದ್ಧ ವಿ.ವಿ.ಪುರಂ ಠಾಣೆಯಲ್ಲಿ ದೂರು ದಾಖಲಾಗಿದ್ದು, ಎನ್ ಡಿಪಿಎಸ್ & ಆರ್ಮ್ಸ್ ಆ್ಯಕ್ಟ್ ಅಡಿಯಲ್ಲಿ ಕೇಸ್ ದಾಖಲಾಗಿದೆ.
Kshetra Samachara
19/01/2022 01:20 pm