ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಹನಿಟ್ರಾಪ್ ಬ್ಲ್ಯಾಕ್‌ಮೇಲ್‌ಗೆ ಬೇಸತ್ತು ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದ ವೈದ್ಯ

ಬೆಂಗಳೂರು: ಕಳೆದ ವರ್ಷ ಆಗಸ್ಟ್‌ನಲ್ಲಿ ಕೆಂಗೇರಿ ರೈಲ್ವೇ ಹಳಿ ಮೇಲೆ ರೈಲಿಗೆ ಸಿಲುಕಿ ವೈದ್ಯರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ರು. ಆ ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್ ಸಿಕ್ಕಿದ್ದು ಸಾವಿಗೆ ಕಾರಣ ಹನಿಟ್ರ್ಯಾಪ್ ಬ್ಲಾಕ್‌ಮೇಲ್ ಅಂತ ಹೇಳಲಾಗ್ತಿದೆ. ಸದ್ಯ ಈ ಸಾವಿಗೆ ಕಾರಣನಾದ ಆರೋಪಿಯನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.

ಭೂಪಾಲ್ ಮೂಲದ ಸಾರ್ಥಕ್ ಎಂಬಾತನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿರುವ ರೈಲ್ವೆ ಪೊಲೀಸರು ಆತನ ಹಿಸ್ಟರಿ ಕೆದಕಿದ್ದಾರೆ. ಸಾರ್ಥಕ್ ಈ ಹಿಂದೆ ಕೂಡ ಸಾಕಷ್ಟು ಮಂದಿಗೆ ಇದೇ ರೀತಿ ಮಾಡಿರುವುದು ಬೆಳಕಿಗೆ ಬಂದಿದೆ. ಇನ್ನು ಡಾಕ್ಟರ್ ಘಟನೆ ನೋಡೋದಾದ್ರೆ, ಕಳೆದ ವರ್ಷ ಆಗಸ್ಟ್ 15ರಂದು ಈ ಘಟನೆ ನಡೆದಿತ್ತು. ಆಗಷ್ಟೇ ಎಂಬಿಬಿಎಸ್ ವ್ಯಾಸಂಗ ಮುಗಿಸಿದ್ದ ವೈದ್ಯ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ರು. ಈ ವೇಳೆ ಭೂಪಾಲ್ ಮೂಲದ ಆರೋಪಿ ಯುವತಿ ಎಂದು ನಕಲಿ ಟೆಲಿಗ್ರಾಮ್ ಹಾಗೂ ಇನ್ ಸ್ಟ್ರಾಗ್ರಾಮ್ ಖಾತೆ ತೆರೆದು ವೈದ್ಯನ ಜತೆ ಚಾಟಿಂಗ್ ಆರಂಭಿಸಿದ್ದ.

ಕ್ರಮೇಣ ಇಬ್ಬರ ನಡುವೆ ಸ್ನೇಹ ಬೆಳದಿದೆ ಆರೋಪಿ ಯುವತಿಯ ಆಶ್ಲೀಲ ಫೋಟೋಗಳನ್ನು ಕಳುಹಿಸಿ, ವೈದ್ಯನಿಂದ ಕೆಲವೊಂದು ಫೋಟೋಗಳನ್ನು ಪಡೆದುಕೊಂಡು ಬೆತ್ತಲೆ ಫೋಟೋ ಹಾಗೂ ವಿಡಿಯೋ ಕಳುಹಿಸಿಕೊಂಡಿದ್ದ. ಇದೇ ಫೋಟೋ ಹಾಗೂ ವಿಡಿಯೋ ಇಟ್ಟುಕೊಂಡು ಆರೋಪಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಹಣ ಕೊಡದಿದ್ರೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಬೆದರಿಕೆ ಹಾಕಿದ್ದ. ಇದರಿಂದ ಹೆದರಿದ ವೈದ್ಯ ಸುಮಾರು 67 ಸಾವಿರ ರೂ. ಹಣವನ್ನು ಆತನ ಖಾತೆಗೆ ವರ್ಗಾವಣೆ ಮಾಡಿದ್ದರು. ಆದರೂ ಇನ್ನಷ್ಟು ಹಣಕ್ಕೆ ಬೇಡಿಕೆ ಇಟ್ಟ ಸಾರ್ಥಕ್ ವೈದ್ಯರನ್ನು ನಿರಂತರವಾಗಿ ಪೀಡಿಸಿದ್ದಾನೆ ಎನ್ನಲಾಗಿದೆ. ಇದರಿಂದ ಬೇಸತ್ತ ವೈದ್ಯ ಕೆಂಗೇರಿ ರೈಲ್ವೆ ನಿಲ್ದಾಣ ಸಮೀಪದಲ್ಲಿ ರೈಲು ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ರೈಲ್ವೆ ವಿಭಾಗದ ಪೊಲೀಸರು ಮಾಹಿತಿ ನೀಡಿದ್ದಾರೆ.

Edited By : Nagaraj Tulugeri
PublicNext

PublicNext

19/01/2022 09:18 am

Cinque Terre

19.36 K

Cinque Terre

0

ಸಂಬಂಧಿತ ಸುದ್ದಿ