ಬೆಂಗಳೂರು: ಸಿಲಿಕಾನ್ ಸಿಟಿಯ ಹೊರವಲಯದಲ್ಲಿ ಕರಾಳ ದಂಧೆಯೊಂದು ಬಯಲಾಗಿದೆ. ಪೆಟ್ರೋಲ್ ತುಂಬಿದ ಟ್ಯಾಂಕರ್ ನಲ್ಲಿ ಬೇಬಿ ಟ್ಯಾಂಕರ್ ಕಂಡು ಪೆಟ್ರೋಲ್ ಬಂಕ್ ಮಾಲಿಕ ಸೇರಿದಂತೆ ಎಲ್ಲರೂ ಬೆಚ್ಚಿ ಬಿದ್ದಿದ್ದಾರೆ. ಹೌದು ಇಂತದೊಂದು ಮೋಸದ ಜಾಲವನ್ನು ಕಾನೂನುಮಾಪನ ಇಲಾಖೆ ಅಧಿಕಾರಿಗಳು ಭೇದಿಸಿದ್ದಾರೆ.
KA01 AL2468 ನಂಬರ್ ನ ಟ್ಯಾಂಕರ್ ನಲ್ಲಿ ಬೇಬಿ ಟ್ಯಾಂಕರ್ ಮಾಡಿ ನೂರಾರು ಲೀಟರ್ ಪೆಟ್ರೋಲ್ ದೋಚುವ ಕರಾಳ ದಂಧೆಯಿದು. ಇದ್ರಿಂದ ಅಂದಾಜು ತಿಂಗಳಿಗೆ 3 ಲಕ್ಷ ವರ್ಷಕ್ಕೆ 36 ಲಕ್ಷ ಬಂಕ್ ಮಾಲೀಕನಿಗೆ ನಾಮಹಾಕಿ ದುಡ್ಡು ಮಾಡುತ್ತಿತ್ತು ಖತರ್ನಾಕ್ ಗ್ಯಾಂಗ್. ದೇವನಗುಂದಿ ಬಳಿಯ ಐಒಸಿಎಲ್, ಎಚ್ ಪಿಸಿಎಲ್ ಸೇರಿ ಹಲವು ಟರ್ಮಿನಲ್ ನಿಂದ ಟ್ಯಾಂಕರ್ ಗೆ ಪೆಟ್ರೋಲ್ ಹಾಕಿಸಿ ರಾಜಧಾನಿ ಸೇರಿ ಉತ್ತರ ಕರ್ನಾಟಕಕ್ಕೂ ಟ್ಯಾಂಕರ್ ಗಳು ರವಾನೆ ಮಾಡಿ ಪೆಟ್ರೋಲ್ ಅನ್ ಲೋಡ್ ಮಾಡುವಾಗ ಬೇಬಿ ಟ್ಯಾಂಕಿಂದ ಮಾಡುತ್ತಿದ್ದರು.
ಈ ಮೋಸದಿಂದ ದಿನಕ್ಕೆ ಕೋಟ್ಯಾಂತರ ರೂಪಾಯಿ ಲಾಭಮಾಡುತ್ತಿದ್ದ, ಲಾರಿ ಚಾಲಕ ಪ್ರವೀಣ್ ಕುಮಾರ್, ಕ್ಲೀನರ್ ಶಿವು, ಟ್ಯಾಂಕರ್ ಮಾಲಕಿ ಶೃತಿ, ಗುತ್ತಿಗೆ ದಾರ ಶಿವರಾಜು ವಿರುದ್ಧ ಅನುಗೊಂಡನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
17/01/2022 02:01 pm