ಬೆಂಗಳೂರು: ನಾವು ಪೊಲೀಸರು ಎಂದು ಹೇಳಿ ಮನೆಯಿಂದ ಹಣ-ಒಡವೆ ತೆಗೆದುಕೊಂಡು ಹೋಗಿದ್ದ ಗ್ಯಾಂಗ್ ಕೊನೆಗೂ ಅರೆಸ್ಟ್ ಆಗಿದೆ. ಕಳೆದ ವರ್ಷದ ಅಂತ್ಯದಲ್ಲಿ ಮಹಾಲಕ್ಷ್ಮಿ ಲೇಔಟ್ ಪೊಲೀಸರ ನಿದ್ದೆಗೆಡಿಸಿದ್ದ ಕೇಸ್ ಕೊನೆನೂ ಪತ್ತೆಯಾಗಿದೆ.
ಕಳೆದ ಡಿಸೆಂಬರ್ 31 ರಂದು ಮಹಾಲಕ್ಷ್ಮಿ ಲೇಔಟ್ ಬಳಿಯ ಭೋವಿಪಾಳ್ಯದಲ್ಲಿ ನಡೆದಿದ್ದ ನಾಟಕೀಯ ಕೃತ್ಯ ಇದು. ಸಮಯನಾಯ್ಕ್ ಎಂಬುವವರ ಮನೆಗೆ ಪೊಲೀಸರ ನೆಪದಲ್ಲಿ ನುಗ್ಗಿದ್ದ ಗ್ಯಾಂಗ್, ನಾವು ತಿಪಟೂರು ಪೊಲೀಸರು ನಿಮ್ಮ ಮನೆ ಸರ್ಚ್ ಮಾಡಬೇಕು, ಇವನೊಬ್ಬ ಕಳ್ಳ, ಕದ್ದ ಮಾಲನ್ನ ನಿಮಗೆ ಕೊಟ್ಟಿದ್ದಾನಂತೆ ಅಂತ ಒಬ್ಬನನ್ನ ತೋರಿಸಿ ಥೇಟ್ ಪೊಲೀಸ್ರು ರೀತಿ ದಾಳಿ ಮಾಡಿದ್ರು. ಇದಕ್ಕೆ ಮನೆಯವರು ತಕರಾರು ತೆಗೆದಾಗ ಗನ್ ತೋರಿಸಿದ ದರೋಡೆಕೋರರು ಮನೆಯವರ ಬಾಯಿ ಮುಚ್ಚಿಸಿದ್ದರು.
ಬಳಿಕ ಪೊನ್ ಗಳನ್ನ ಕಿತ್ತುಕೊಂಡು ಎರಡು ಘಂಟೆ ಮನೆ ಸರ್ಚ್ ಮಾಡಿದ್ದ ಗ್ಯಾಂಗ್ ಮನೆಯಲ್ಲಿದ್ದ 19 ಲಕ್ಷ ನಗದು ಹಣ, 500 ಗ್ರಾಂ ಚಿನ್ನಾಭರಣ ಪೊಲೀಸರಂತೆ ಜಫ್ತಿ ಮಾಡಿದ್ರು ಸೂಟ್ ಕೇಸ್ ನಲ್ಲಿ ಹಾಕೊಂಡು
ಸಮಯನಾಯ್ಕ್ ರ ಪುತ್ರ ಮಂಜುನಾಥ್ ನ ಜೊತೆಗೆ ಕರ್ಕೊಂಡು ಹೊರಟೇ ಹೋಗಿದ್ರು.
ನಂತರ ಊರು ಸುತ್ತಾಡಿ 20 ಲಕ್ಷ ಹಣ ಕೊಟ್ರೆ ಜಪ್ತಿ ಮಾಡಿದ ಒಡವೆ ಕೊಟ್ಟು ಕೇಸ್ ಕೂಡ ಹಾಕಲ್ಲ ಡೀಲ್ ಮಾತನಾಡಿದ್ರು ಇದಕ್ಕೆ ಮಂಜುನಾಥ್ ನಿರಾಕರಿಸಿದ್ದಕ್ಕೆ ಜಪ್ತಿ ಮಾಡೊ ನೆಪದಲ್ಲಿ ರಾಬರಿ ಮಾಡಿದ್ದ 500 ಗ್ರಾಂ ಚಿನ್ನಾಭರಣ, 19 ಲಕ್ಷ ನಗದು ಎತ್ತಿಕೊಂಡು ಠಾಣೆಗೆ ಕರೆದಾಗ ಬರಬೇಕು ಮಂಜುನಾಥ್ ನನ್ನ ಬಿಟ್ಟು ಹೋಗಿದ್ರು. ನಂತರ ಪೊಲೀಸ್ ಠಾಣೆಗೆ ತೆರಳಿ ವಿಚಾರಿಸಿದಾಗ ನಕಲಿ ಪೊಲೀಸರು ರಾಬರಿ ಮಾಡಿರೋದು ಗೊತ್ತಾಗಿತ್ತು.
ಇನ್ನು ಕೃತ್ಯಕ್ಕೆ ಸಮಯನಾಯ್ಕರ್ ಸಂಬಂಧಿ ರಾಹುಲ್ @ ದೀಪು ಎಂಬಾತನೇ ಪ್ಲಾನ್ ಮಾಡಿದ್ದು, ಹಣ ಪೀಕುವ ಉದ್ದೇಶದಿಂದ ತನ್ನ ಸ್ನೇಹಿತರನ್ನ ಕಳುಹಿಸಿ ಈ ಕೆಲಸ ಮಾಡಿಸಿದ್ದ. ಕೃತ್ಯದಲ್ಲಿ ಭಾಗಿಯಾಗಿದ್ದ ಇಬ್ಬರು ರೌಡಿ ಶೀಟರ್ ಸೇರಿ ಒಟ್ಟು ಐವರು ಅರೋಪಿಗಳನ್ನ ಮಹಾಲಕ್ಷ್ಮಿ ಲೇಔಟ್ ಇನ್ಸ್ಪೆಕ್ಟರ್ ಕಾಂತರಾಜು ಅಂಡ್ ಟೀಂ ಅರೆಸ್ಟ್ ಮಾಡಿದ್ದಾರೆ.
PublicNext
15/01/2022 07:32 pm