ಬೆಂಗಳೂರು: ಇಡೀ ಬೆಂಗಳೂರನ್ನು ಬೆಚ್ಚಿ ಬೀಳಿಸಿದ್ದ ಯೂ ಟರ್ನ್ ಡಾಬಾಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಸಪ್ಲೈಯರ್ ಮನೋಜ್ ಜೀವ ಬಿಟ್ಟಿದ್ದು, ಪೊಲೀಸ್ರು ಕೇಸ್ ಬುಕ್ ಮಾಡಿದ್ದು ಹಳೆ ಕತೆ. ಎಣ್ಣೆ ಏಟಿಗೆ ಗಲಾಟೆ ಅಂದುಕೊಂಡಿದ್ದ ಪೊಲೀಸ್ರಿಗೆ ತನಿಖೆ ವೇಳೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಮೊದಲಿಗೆ ಡಾಬಾ ರಸ್ತೆಯಿಂದ ಹಿಡಿದು ಯಶವಂತ ಪುರ ವರೆಗೂ ಪೊಲೀಸ್ರು ರಸ್ತೆಯುದ್ದಕ್ಕೂ ಆ ಬೈಕ್ ಪಾಸ್ ಆದ ದೃಶ್ಯದ ಬೆನ್ನು ಹತ್ತಿದ್ರು. ಹೀಗೆ ಬೆನ್ನು ಹತ್ತಿದ ಬೈಕ್ ಬಂದು ನಿಂತಿದ್ದು ಇದೇ ಯೂ ಟರ್ನ್ ಡಾಬಾದ ವನ್ ಆಫ್ ದಿ ಓನರ್ ಅರ್ಪಿತ್ ಹೆಂಡತಿ ಶೀತಲ್ ಬಳಿಗೆ...!
ಎಸ್. ಗಂಡನಿಗೆ ಬುದ್ಧಿ ಕಲಿಸಲು ಶೀತಲ್ ತನ್ನ ಸ್ನೇಹಿತ ರೌಡಿ ಶೀಟರ್ ಮನು ಕುಮಾರ್ ಗೆ 20 ಸಾವಿರಕ್ಕೆ ಸುಪಾರಿ ನೀಡಿದ್ಳು. ಮದುವೆಯಾದ 4 ತಿಂಗಳಲ್ಲೇ ಇಬ್ಬರ ಮಧ್ಯೆ ವೈಮನಸ್ಸು ಶುರುವಾಗಿತ್ತು. ಈ ಹಿನ್ನೆಲೆ ಶೀತಲ್ ನನ್ನು ತವರು ಮನೆಗೆ ಕಳುಹಿಸಿದ್ದ ಅರ್ಪಿತ್. ಇದರಿಂದ ಕೋಪಗೊಂಡಿದ್ದ ಶೀತಲ್, ಅರ್ಪಿತ್ ಗೆ ತಕ್ಕ ಪಾಠ ಕಲಿಸಲು ಮುಂದಾಗಿದ್ದಳು.
ಶೀತಲ್ ತನ್ನಅಣ್ಣ ನಿಶ್ಚಲ್ ಗೆ ಜತೆ ಸೇರಿ, ಅರ್ಪಿತ್ ಗೆ ಹೆದರಿಸುವ ಪ್ಲಾನ್ ಮಾಡಿ ಸ್ನೇಹಿತ ಮನುಕುಮಾರ್ ನಲ್ಲಿ ಕೇಳಿಕೊಂಡಿದ್ದಳು. ಮನು, ಅರ್ಪಿತ್ ಗೆ ಬೆದರಿಸಲು 20 ಸಾವಿರಕ್ಕೆ ಬೇಡಿಕೆಯಿಟ್ಟಿದ್ದ. ಸುಪಾರಿ ತಕೊಂಡ ಮನು, ಸಹಚರರಿಗೆ 5 ಸಾವಿರ ಕೊಟ್ಟು ಬೆಂಕಿ ಹಚ್ಚಲು ತಿಳಿಸಿದ್ದ.
ಮಂಜುನಾಥ್ ಹಾಗೂ ಹೇಮಂತ್ ಗೆ 5 ಸಾವಿರ ಕೊಟ್ಟು ಡಾಬಾಗೆ ಬೆಂಕಿ ಹಾಕಲು ಹೇಳಿದ್ದ. ಇದ್ರಂತೆ ಡಿ. 24ರಂದು 12 ಗಂಟೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿತ್ತು. ಈ ವೇಳೆ ಮನೋಜ್ ಗೂ ಬೆಂಕಿ ತಗುಲಿ ಸಾವನ್ನಪ್ಪಿದ್ದರು. ಮಂಜುನಾಥ್, ಹೇಮಂತ್ ಬಂಧನವಾಗಿದ್ರೆ, ಮನು ಮೈಸೂರ್ ನಲ್ಲಿ ಹಳೆ ಕೇಸ್ ನಲ್ಲಿ ಸರೆಂಡರ್ ಆಗಿದ್ದಾನೆ. ಇತ್ತ ಸುಪಾರಿ ಕೊಟ್ಟಿದ್ದ ಅಣ್ಣ-ತಂಗಿ ನಿಶ್ಚಲ್, ಶೀತಲ್ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
PublicNext
14/01/2022 02:54 pm