ನೆಲಮಂಗಲ: ಮದ್ಯ ಮಾರಾಟ ಮಳಿಗೆಯ ಶೆಟರ್ ಬೀಗ ಮುರಿದು ಮಳಿಗೆಯಲ್ಲಿದ್ದ ಮದ್ಯ ಮತ್ತು ಹಣ ಕಳ್ಳತನ ಮಾಡಿರುವ ಘಟನೆ ನೆಲಮಂಗಲ ತಾಲ್ಲೂಕು ತ್ಯಾಮಗೊಂಡ್ಲು ಹೊರವಲಯದ ಅಮಾನಿಕೆರೆ ಕೆರೆಕೋಡಿ ಬಳಿಯ ನಟರಾಜ ಕಾಂಪ್ಲೆಕ್ಸ್ ನಲ್ಲಿದ್ದ MSIL ಮಳಿಗೆಯಲ್ಲಿ ನಡೆದಿದೆ.
ಕ್ಯಾಶ್ ಬಾಕ್ಸ್ ನಲ್ಲಿದ್ದ 1.80 ಲಕ್ಷ ಹಣ ಹಾಗೂ 30 ಸಾವಿರ ಮದ್ಯ ಕಳ್ಳತನವಾಗಿದ್ದು, ಹ್ಯಾಂಡ್ ಗ್ಲೌಜ್ ಬಳಸಿ ದುಷ್ಕರ್ಮಿಗಳು ಕೃತ್ಯ ನಡೆಸಿದ್ದಾರೆ. ಕೃತ್ಯದ ಬಳಿಕ ಸಿಸಿಟಿವಿ ಡಿವಿಆರ್ ಅನ್ನು ಸಹ ಕಳ್ಳರು ಹೊತ್ತೊಯ್ದಿದ್ದಾರೆ.
ಈ ಸಂಬಂಧ ತ್ಯಾಮಗೊಂಡ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
11/01/2022 08:28 pm