ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕೆಲಸಕ್ಕೆ ಹೋಗು ಅಂದಿದ್ದೆ ತಪ್ಪಾಯ್ತಾ? ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವಕ

ಬೆಂಗಳೂರು: ಎದೆಯತ್ತರಕ್ಕೆ ಬೆಳೆದು ನಿಂತ‌ ಮಗನಿಗೆ ಕೆಲಸಕ್ಕೆ ಹೋಗುವಂತೆ ತಂದೆ-ತಾಯಿ ಬೈದು ಬುದ್ದಿ ಹೇಳಿದ್ದರು. ಇದರಿಂದ ಕೋಪಗೊಂಡು ಚಾಕುವಿನಿಂದ ಕುಯ್ದುಕೊಂಡು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಜೆಜೆಆರ್ ನಗರದ ಠಾಣ ವ್ಯಾಪ್ತಿಯಲ್ಲಿ ಘಟನೆ‌ನಡೆದ್ದು, ೨೩ವರ್ಷದ ಸೈಯ್ಯದ್ ಸಾಹೀಲ್ ಆತ್ಮಹತ್ಯೆ ಗೆ ಶರಣಾಗಿದ್ದಾನೆ.ಬಾಡಿಗೆ ಮನೆಯೊಂದರಲ್ಲಿ ಮೃತನ ಕುಟುಂಬ ವಾಸವಾಗಿತ್ತು, ಪೋಷಕರಿಗೆ ಮೂವರು ಹೆಣ್ಣು ಹಾಗೂ ಇಬ್ಬರು ಗಂಡು ಮಕ್ಕಳು ಸೇರಿ ಐವರ ಮಕ್ಕಳಿದ್ರು.

ಈ ಪೈಕಿ ಸೈಯ್ಯದ್ ಮೂರನೇಯವನಾಗಿದ್ದ, ಜೀವನಕ್ಕಾಗಿ ಸ್ಕ್ರಾಪ್ ಕೆಲಸಕ್ಕಾಗಿ ಹೋಗುತ್ತಿದ್ದ ಸೈಯ್ಯದ್ ದುಶ್ಚಟ್ಟ ಒಳಗಾಗಿ ಏರಿಯಾ ಹುಡುಗರೊಂದಿಗೆ ಓಡಾಡಿಕೊಂಡಿದ್ದ. ಮಗನ ನಡವಳಿಕೆ‌ ಕಂಡು ಹಲವು ಬಾರಿ ಪೋಷಕರು ತಿಳುವಳಿಕೆ ಹೇಳಿದ್ರು. ಇಷ್ಟಾದರೂ ಮಾತು ಕೇಳ‌ದ ಸೈಯ್ಯದ್ ನಿನ್ನೆ ಕೆಲಸಕ್ಕೆ ಹೋಗದೆ ಮನೆಯಲ್ಲಿರುವಾಗ ತಂದೆ ಬೈದು ಬುದ್ದಿ ಹೇಳಿದ್ದಾರೆ.

ಇದರಿಂದ‌ ಅಸಮಾಧಾನಗೊಂಡು ಅಡುಗೆ ಮನೆಯಲ್ಲಿದ್ದ ತರಕಾರಿ ಕತ್ತರಿಸುವ ಚಾಕುವಿನಿಂದ ಕುಯ್ದುಕೊಂಡು ತನ್ನನ್ನು ಕೆಲಸಕ್ಕೆ ಹೋಗುವಂತೆ ಬಲವಂತ ಮಾಡದಂತೆ ತಾಯಿ ಎದುರು‌ ಕೂಗಾಡಿದ್ದ. ರಕ್ತಸ್ರಾವವಾಗರುವುದನ್ನು ಕಂಡು ತಾಯಿ ಪ್ಲಾಸ್ಟರ್ ಹಾಕಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದರು‌.‌ ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಇಂದು ನಸುಕಿನ ವೇಳೆ‌ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Edited By :
PublicNext

PublicNext

10/01/2022 03:08 pm

Cinque Terre

13.82 K

Cinque Terre

0

ಸಂಬಂಧಿತ ಸುದ್ದಿ