ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಬುರಗಿ: ಅಪ್ಪನ ಆತ್ಮಹತ್ಯೆ ಯತ್ನಕ್ಕೆ ಮಕ್ಕಳ್ಳಿಬ್ಬರ ಮರಣ

ಕಲಬುರಗಿ:ಮಕ್ಕಳಿಬ್ಬರ ಜೊತೆಗೆ ತಂದೆ ಬಾವಿಗೆ ಹಾರಿದ ಘಟನೆ ಜಿಲ್ಲೆಯ ಕಮಲಾಪುರ ತಾಲೂಕಿನ ಗೊಬ್ಬರುವಾಡಿ ಗ್ರಾಮದಲ್ಲಿ ನಡೆದಿದೆ. ಆದರೆ ದುರಂತ ಅಂದರೆ ತಂದೆ ಬಚಾವ್ ಆಗಿದ್ದಾರೆ. ಮಕ್ಕಳಿಬ್ಬರು ಮೃತಪಟ್ಟಿದ್ದಾರೆ.

ಮೃತಮಕ್ಕಳನ್ನ ಪ್ರಣತಿ (6) ಮತ್ತು ಶಿವಕುಮಾರ್ (4) ಅಂತಲೇ ಗುರುತಿಸಲಾಗಿದೆ. ಆತ್ಮಹತ್ಯೆಗೆ ಪ್ರಯತ್ನಿಸಿದ ತಂದೆಯನ್ನ ಶರಣಪ್ಪರನ್ನ ಗ್ರಾಮಸ್ಥರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆದರೆ ಮಕ್ಕಳ ಸಾವಿನಿಂದ ಇಡೀ ಗ್ರಾಮವೇ ಕಂಬನಿ ಮಿಡಿದಿದೆ. ಕಮಲಾಪುರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ. ಸಾಲಬಾಧೆಯಿಂದಲೇ ತಂದೆ ಮಕ್ಕಳ ಜತೆಗೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಅಂತ ಶಂಕಿಸಲಾಗಿದೆ.

Edited By :
Kshetra Samachara

Kshetra Samachara

10/01/2022 12:12 pm

Cinque Terre

214

Cinque Terre

0

ಸಂಬಂಧಿತ ಸುದ್ದಿ