ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಕ್ ಗೆ ಬೆನ್ನತ್ತಿ ಕೊಲೆಗೆ ಯತ್ನ : ದುಷ್ಕರ್ಮಿಗಳಿಂದ ವ್ಯಕ್ತಿ ಬಚಾವ್

ಚಿಕ್ಕಬಳ್ಳಾಪುರ : ಹಾಡಹಗಲೇ ವ್ಯಕ್ತಿಯ ಕೊಲೆಗೆ ಯತ್ನಿಸಿದ ಘಟನೆ ಶಿಡ್ಲಘಟ್ಟ ನಗರದ ಸಂತೆ ಬೀದಿ ಶಾಮಣ್ಣ ಬಾವಿ ಬಳಿ ನಡೆದಿದೆ.

ತಮಿಳುನಾಡು ಮೂಲದ 32 ವರ್ಷದ ಯುವರಾಜ ಎಂಬಾತನ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಹಿಂಬಾಲಿಸಿದ ದುಷ್ಕರ್ಮಿಗಳು ಹಿಂಬದಿಯಿಂದ ಲಾಂಗ್ ಬೀಸಿ ಪರಾರಿಯಾಗಿದ್ದಾರೆ.

ಕೊಲೆಯತ್ನಕ್ಕೆ ಕಾರಣ ತಿಳಿದು ಬಂದಿಲ್ಲ. ಸದ್ಯ ಗಾಯಾಳನ್ನು ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶಿಡ್ಲಘಟ್ಟ ನಗರ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Edited By : Shivu K
PublicNext

PublicNext

08/01/2022 05:47 pm

Cinque Terre

63.84 K

Cinque Terre

0

ಸಂಬಂಧಿತ ಸುದ್ದಿ