ನೆಲಮಂಗಲ: ಕಾಡು ಪ್ರಾಣಿಗಳ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯಾಧಿಕಾರಿ ಲಷ್ಕರ್ ನಾಯಕ್ ಮತ್ತು ಉಪ ಅರಣ್ಯಾಧಿಕಾರಿ ಶಿವಕುಮಾರ್ ನೇತೃತ್ವದ ತಂಡ ಇಬ್ಬರನ್ನ ಈಗ ಬಂಧಿಸಿದೆ.
ಗ್ರಾ.ಪಂ ಸದಸ್ಯ ಉಮೇಶ್ (45), ಹನುಮಂತಯ್ಯ (73) ಅವರನ್ನೇ ಈಗ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಬೇಟೆ ಆಡಿದ ಪ್ರಾಣಿಗಳನ್ನ ರಸ್ತೆ ಉದ್ದಕ್ಕೂ ಮೆರವಣಿಗೆ ತಮಟೆ ಹೊಡೆದು ಕುಣ್ಣಿದು ಕುಪ್ಪಳಿಸಿದ್ದರು. ಮೊಲ, ಕಾಡುಕೋಳಿ, ಕೊಕ್ಕರೆ ಸೇರಿದಂತೆ ಇತರೆ ಪ್ರಾಣಿಗಳ ಬೇಟೆ ಆಡಿ,ಅವುಗಳನ್ನ ಮಾರುಕಟ್ಟೆಯಲ್ಲಿ ಹರಾಜು ಕೂಡ ಮಾಡಿದ್ದರು.
ಆರೋಪಿಗಳ ವಿರುದ್ಧ ಅರಣ್ಯಧಿಕಾರಿಗಳು ದೂರು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ಸೆಕ್ಷನ್ 9 ಅನ್ವಯ ಪ್ರಕರಣ ಕೂಡ ದಾಖಲಾಗಿದೆ. ಆದರೆ ಯಾವುದೇ ಕ್ರಮ ಜರುಗಿಸದಂತೆ ಸ್ಥಳೀಯ ರಾಜಕೀಯ ಮುಖಂಡರು ಅರಣ್ಯಾಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆನ್ನಲಾಗಿದೆ.
Kshetra Samachara
08/01/2022 11:08 am