ದೊಡ್ಡಬಳ್ಳಾಪುರ: ಗಾರ್ಮೆಂಟ್ಸ್ ಗೆ ಹೋಗುತ್ತಿದ್ದ ಹೆಂಡತಿ ಸಹದ್ಯೋಗಿ ಜೊತೆ ಅನೈತಿಕ ಸಂಬಂಧ ಇಟ್ಕೊಂಡಿದ್ಳು. ಗಂಡ ಫಿಟ್ಸ್ ಬಂದು ಸಾವನ್ನಪ್ಪಿದ್ದಾನೆಂದು ಕಥೆ ಕಟ್ಟಿದ ಆಕೆ ಗಂಡನ ಅಂತಿಮ ಕಾರ್ಯ ಮುಗಿಸಿ ತಾನು ಬಚಾವ್ ಆದೆನೆಂದು ಸುಮ್ಮನಾಗಿದ್ಳು. ಆದರೆ, ಆಕೆ ಮಗನೇ ಅಪ್ಪನ ಕೊಲೆ ರಹಸ್ಯ ಬಿಚ್ಚಿಟ್ಟಿದ್ದ.
ನಗರದ ಕರೇನಹಳ್ಳಿ ನಿವಾಸಿ ರಾಘವೇಂದ್ರ (41) ಅನುಮಾನಾಸ್ಪದವಾಗಿ ಸಾವನ್ನಪ್ಪಿದ ದುರ್ದೈವಿ. ಡಿ. 26 ರ ರಾತ್ರಿ 2 ಗಂಟೆ ಸಮಯದಲ್ಲಿ ಫಿಟ್ಸ್ ಬಂದು ಸಾವನ್ನಪ್ಪಿದ್ದರೆಂದು ಹೆಂಡತಿ ಶೈಲಜಾ ತಿಳಿಸಿದ್ದಳು. ಈ ಮೊದಲೇ ಫಿಟ್ಸ್ ಬರುತ್ತಿದ್ದ ಬಗ್ಗೆ ತಿಳಿದಿದ್ದ ಮೃತನ ಸಹೋದರರು ಅಂತಿಮ ಕಾರ್ಯ ಮತ್ತು 3ನೇ ದಿನದ ಹಾಲು ತುಪ್ಪ ಕಾರ್ಯ ಮುಗಿಸಿ ಸುಮ್ಮನಾಗಿದ್ರು. ಆದರೆ, ಮೃತರ ಮಗ ಪವನ್, ರಾತ್ರಿ ನಡೆದ ಅಪ್ಪನ ಕೊಲೆ ರಹಸ್ಯ ಬಯಲು ಮಾಡಿದ.
ಗಾರ್ಮೆಂಟ್ಸ್ ಕೆಲಸಕ್ಕೆ ಹೋಗುತ್ತಿದ್ದ ಶೈಲಜಾಗೆ ಅದೇ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧ ಇತ್ತು. ಗಂಡ ಇಲ್ಲದ ಸಮಯ ಆತ ಬಂದು- ಹೋಗುತ್ತಿದ್ದ. ಡಿ. 26ರ ರಾತ್ರಿ 11ರ ಸಮಯ ಬಂದಿದ್ದ ಆತ ಶೈಲಜಾ ಮತ್ತು ಶೈಲಜಾಳ ಅಮ್ಮನ ಜೊತೆಯಾಗಿ ರಾಘವೇಂದ್ರರ ಕೊಲೆ ಮಾಡಿದ್ದಾರೆ. ಮನೆಯಲ್ಲಿದ್ದ ಪವನ್, ಅಪ್ಪನ ಕೊಲೆ ಕಣ್ಣಾರೆ ಕಂಡಿದ್ದ. ಕೊಲೆ ರಹಸ್ಯ ಹೊರಗೆ ಹೇಳದಂತೆ ತಾಯಿ ಶೈಲಜಾ ಬೆದರಿಕೆ ಸಹ ಹಾಕಿದ್ಳು.
ಪವನ್ ತನ್ನ ಚಿಕ್ಕಪ್ಪ, ದೊಡ್ಡಪ್ಪರಿಗೆ ಸತ್ಯಾಂಶ ತಿಳಿಸಿದ. ಕೊಲೆಗೆ ಸಾಕ್ಷಿ ಎನ್ನುವಂತೆ ಮನೆ ತುಂಬಾ ಬಿದ್ದಿರುವ ರಕ್ತದ ಕಲೆ, ಬಟ್ಟೆಗಳೂ ರಕ್ತಮಯವಾಗಿರುವುದು ಕೊಲೆಯನ್ನ ಧೃಡಪಡಿಸಿದೆ. ಗಂಡನ 11ನೇ ದಿನದ ಕಾರ್ಯಕ್ಕೂ ಶೈಲಜಾ ಬರದೇ ತಲೆಮರೆಸಿಕೊಂಡಿರುವುದು ಸಹ ಆಕೆಯೇ ಕೊಲೆ ಮಾಡಿರುವುದನ್ನ ಸಾಬೀತುಪಡಿಸುತ್ತಿದೆ. ನಗರ ಠಾಣೆಗೆ ದೂರು ನೀಡಲಾಗಿದೆ.
PublicNext
07/01/2022 09:14 pm