ಬೆಂಗಳೂರು: ಭ್ರಷ್ಟಾಚಾರ ತಡೆಗೆ ಎಷ್ಟೇಲ್ಲಾ ಕಠಿಣ ಕ್ರಮಗಳನ್ನು ಕೈಗೊಂಡರು ಲಂಚ ಪ್ರಕರಣಗಳು ಅಲ್ಲಲ್ಲಿ ಕೇಳಿ ಬರುತ್ತಿವೆ.
ಸದ್ಯ ಲಂಚ ಪಡೆದ ಆರೋಪದಡಿ ಮಡಿವಾಳ ಇನ್ಸ್ ಪೆಕ್ಟರ್ ಸುನಿಲ್ ನಾಯಕ್ ಅವರನ್ನು ಸಸ್ಪೆಂಡ್ ಮಾಡಿ ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂಥ್ ಆದೇಶ ಹೊರಡಿಸಿದ್ದಾರೆ.
ವರದಕ್ಷಿಣೆ ಕಿರುಕುಳ ಸಂಬಂಧ ಅಜಯ್ ಎಂಬ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ್ದ ಪೊಲೀಸರು ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಕೋರ್ಟ್ ಗೆ ಹಾಜರಾಗದೇ ಇದುದ್ದರಿಂದ ಆರೋಪಿ ವಿರುದ್ಧ ವಾರಂಟ್ ಜಾರಿ ಮಾಡಲಾಗಿದ್ದು,
ಹೀಗಾಗಿ ಠಾಣೆಗೆ ಕರೆದುಕೊಂಡು ಬಂದ ಪೊಲೀಸರು ಲಂಚ ಪಡೆದು ಅಜಯ್ & ಆತನ ಪೋಷಕರನ್ನು ಬಿಟ್ಟು ಕಳುಹಿಸಿದ್ದರು.
ಇದರ ವಿಡಿಯೋ ಮಾಡಿದ ಆರೋಪಿ ಕಮಿಷನರ್ ಕಮಲ್ ಪಂಥ್ ಗೆ ನೀಡಿದ್ದ. ಸದ್ಯ ಎಲ್ಲ ರೀತಿಯ ಮಾಹಿತಿ ಪಡೆದ ಕಮಿಷನರ್ ಸಸ್ಪೆಂಡ್ ಆದೇಶ ಹೊರಡಿಸಿದ್ದಾರೆ.
Kshetra Samachara
03/01/2022 07:14 pm