ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸ ವರ್ಷದ ದಿನವೇ ರಾಮನಗರದ ರೆಸಾರ್ಟ್ ಮೇಲೆ ಪೊಲೀಸರ ದಾಳಿ

ರಾಮನಗರ : ಹೊಸ ವರ್ಷದ ಆಚರಣೆಗೆ ಸರ್ಕಾರ ವಿಧಿಸಿದ ರೂಲ್ಸ್ ಗಳನ್ನು ಬ್ರೇಕ್ ಮಾಡಿ ಮೋಜು ಮಸ್ತಿಗೆ ಅವಕಾಶ ಕೊಟ್ಟ ರಾಮನಗರದ ರೆಸಾರ್ಟ್ ಮೇಲೆ ಪೊಲೀಸರ ದಾಳಿ ನಡೆಸಿದ್ದಾರೆ.

ರಾಮನಗರ ಎಸ್ ಪಿ ಗಿರೀಶ್ ನೇತೃತ್ವದಲ್ಲಿ ರಾಮನಗರದ ಕಣ್ವ ಜಲಾಶಯ ಬಳಿಯ ಟ್ರೀಕ್ಯೂಟ್ರಾ ರೆಸಾರ್ಟ್ ಮೇಲೆ ಪೊಲೀಸರ ದಾಳಿ ನಡೆಸಿದ್ದಾರೆ. ಈ ರೆಸಾರ್ಟ್ ನಲ್ಲಿ ನಿಷೇಧಾಜ್ಞೆ ಬ್ರೇಕ್ ಮಾಡಿದ ರೆಸಾರ್ಟ್ ಮಾಲೀಕ ಆನ್ ಲೈನ್ ಬುಕ್ಕಿಂಗ್ ಮೂಲಕ ಪಾರ್ಟಿ ಆಯೋಜಿಸಿದ್ದ.

ಪಾರ್ಟಿಗೆ ಬರುವವರಿಗೆ ಉಳಿದುಕೊಳ್ಳಲು ನೂರಾರು ಟೆಂಟ್ ವ್ಯವಸ್ಥೆಯನ್ನು ಸಹ ಮಾಡಲಾಗಿತ್ತು. ಪಾರ್ಟಿಯಲ್ಲಿ ಡಿಜೆ ಮ್ಯೂಸಿಕ್ ನಲ್ಲಿ ಬೆಂಗಳೂರು ಸೇರಿದಂತೆ ಮತ್ತಿತರ ಕಡೆಯಿಂದ ಬಂದಿದ್ದ ಸಾವಿರಾರು ಜನ ಯುವಕ, ಯುವತಿಯರು, ಮದ್ಯವಯಸ್ಕರು, ಮಕ್ಕಳು ಎಂಜಾಯ್ ಮಾಡುತ್ತಿದ್ದರು.

ಜನವರಿ 2ರ ತನಕ ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದರು. ಇದಾವುದನ್ನು ಕೇರ್ ಮಾಡದ ರೆಸಾರ್ಟ್ ಮಾಲೀಕ ಸ್ವಾಮಿ ವಿರುದ್ಧ ಎಪಿಡೇಮಿಕ್ ಆಕ್ಟ್ ಕೇಸ್ ದಾಖಲಾಗಿದೆ. ಎಂ.ಕೆ.ದೊಡ್ಡಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Edited By : Shivu K
PublicNext

PublicNext

01/01/2022 08:50 am

Cinque Terre

24.59 K

Cinque Terre

0

ಸಂಬಂಧಿತ ಸುದ್ದಿ