ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿಯ ಹೊಸೂರು ರಸ್ತೆ ಬಳಿ ಡಿ.೨೭ ರಂದು ಇನ್ನೋವಾ ಕಾರಿನಲ್ಲಿ ಅರ್ಚನಾ ಎಂಬ ಮಹಿಳೆ ಬರುತ್ತಿದ್ದಾಗ ಕಾರನ್ನ ಅಡ್ಡಗಟ್ಟಿ ಕೊಲೆ ಮಾಡಲಾಗಿತ್ತು. ಈ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ
ಸಿಸಿ ಟಿವಿ ಆಧಾರದ ಮೇಲೆ ಈ ಕೊಲೆ ಪ್ರಕರಣ ತನಿಖೆ ಕೈಗೊಳ್ಳಲಾಗಿತ್ತು, ತನಿಖೆಯಲ್ಲಿ ಮುಖ್ಯವಾದ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆಯ ಸಂಪೂರ್ಣ ಮಾಹಿತಿ ಬೆಳಕಿಗೆ ಬಂದಿದೆ.ಅಸಲಿಗೆ ಇದೆಲ್ಲದರ ಮಾಸ್ಟರ್ ಮೈಂಡ್ ಪತಿ ಹಾಗೂ ಮಗಳೇ ಆಗಿದ್ದಾಳೆ.ಸದ್ಯ ಕೊಲೆ ಪ್ರಕರಣ ಸಂಬಂಧ ಇದೀಗ ಏಳು ಆರೋಪಿಗಳನ್ನ ಬಂಧಿಸಿದ್ದೇವೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಜೋಶಿ ಹೇಳಿಕೆ ನೀಡಿದ್ದಾರೆ.
ಆಸ್ತಿಯನ್ನ ಕಬಳಿಸಲು ಈ ಕೊಲೆ ಮಾಡಲಾಗಿದೆ ಎಂಬ ಮಾಹಿತಿ ಪ್ರಾಥಮಿಕ ತನಿಖೆಯ ವೇಳೆ ತಿಳಿದುಬಂದಿದೆ ಹಾಗೂ ಕೊಲೆ ಪ್ರಕರಣದಲ್ಲಿ ಕೃತ್ಯಕ್ಕೆ ಬಳಸಿದ್ದ ವಾಹನ ಹಾಗೂ ಮಾರಕಾಸ್ತ್ರಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.
ಸದ್ಯ ಪ್ರಕರಣ ಸಂಬಂಧ ತನಿಖೆ ಮುಂದುವರಿದಿದ್ದು, ಆರೋಪಿಗಳಾದ, ನವೀನ್ ಕುಮಾರ್( ಅರ್ಚನಾ ಮೂರನೆ ಪತಿ) , ನವೀನ್ ಸ್ನೇಹಿತರಾದ ಸಂತೋಷ್ , ಅನೂಪ್,ಆನಂದ್, ನರೇಂದ್ರ ಹಾಗೂ ಅರ್ಚನಾ ರೆಡ್ಡಿ ಮಗಳಾದ ದೀಪು ಬಂಧಿತ ಆರೋಪಿಗಳಾಗಿದ್ದಾರೆ.
PublicNext
30/12/2021 12:42 pm