ಬೆಂಗಳೂರು: ನಿನ್ನೆ(ಸೋಮವಾರ) ರಾತ್ರಿ ಅರ್ಚನಾ ರೆಡ್ಡಿ(38) ಎಂಬ ಮಹಿಳೆಯ ಬರ್ಬರ ಹತ್ಯೆ ನಿಜಕ್ಕೂ ಬೆಂಗಳೂರಿನ ಜನತೆಯನ್ನು ಬೆಚ್ಚಿ ಬೀಳಿಸಿದೆ! ಘಟನೆ ನಡೆದಿರೋದು ಬೆಂಗಳೂರಿನ ಹೊಸೂರು ಮುಖ್ಯರಸ್ತೆ ಹೊಸರೋಡ್ ಬಳಿ. ಅರ್ಚನಾ ರೆಡ್ಡಿ ಪ್ರಿಯಕರ ನವೀನನೇ ಕೊಲೆ ಮಾಡಿದ ಆರೋಪಿ.
ಅರ್ಚನಾ ರೆಡ್ಡಿ 5 ವರ್ಷಗಳ ಹಿಂದೆ ಪತಿಯಿಂದ ದೂರವಾಗಿದ್ದು, ನಂತರದ ದಿನಗಳಲ್ಲಿ ನವೀನ್ ಕುಮಾರ್ ಜತೆ ಸಂಬಂಧ ಇಟ್ಟುಕೊಂಡಿದ್ದಳು. ಚನ್ನಪಟ್ಟಣ ಬಳಿಯ ಆಸ್ತಿಗೆ ಸಂಬಂಧಿಸಿ ಇಬ್ಬರ ನಡುವೆ ಇತ್ತೀಚೆಗೆ ಜಗಳವಾಗಿದ್ದು, ಅಂದಿನಿಂದ ಅರ್ಚನಾ ಮೊದಲ ಪತಿಯ ಮಗನೊಂದಿಗೆ ಬೆಳ್ಳಂದೂರಿನಲ್ಲಿ ವಾಸವಿದ್ದರು.
ನಿನ್ನೆ ಜಿಗಣಿ ಪುರಸಭೆ ಚುನಾವಣೆಯಲ್ಲಿ ಮತದಾನ ಮಾಡಲು ಜಿಗಣಿಗೆ ಅರ್ಚನಾ ತೆರಳಿದ್ದ ಮಾಹಿತಿ ಪಡೆದಿದ್ದ ನವೀನ್, ತನ್ನ ಸಹಚರರೊಂದಿಗೆ ಹೊಸರೋಡ್ ಬಳಿ ಕಾದು ಕುಳಿತು, ರಾತ್ರಿ ಅರ್ಚನಾ ಹಾಗೂ ಮಗ, ಮತ್ತಿಬ್ಬರು ಯುವಕರೊಂದಿಗೆ ಕಾರಿನಲ್ಲಿ ಬರುವ ವೇಳೆ ನವೀನ್ ಹಾಗೂ ಸಹಚರರು ಹಾಕಿ ಸ್ಟಿಕ್, ಲಾಂಗ್ ನಿಂದ ದಾಳಿ ನಡೆಸಿದ್ದಾರೆ. ಈ ವೇಳೆ ಕಾರು ಚಲಾಯಿಸುತ್ತಿದ್ದ ಮಗ ಹಾಗೂ ಇನ್ನುಳಿದವರು ಪರಾರಿಯಾಗಿದ್ದು, ನವೀನ್ ಹಾಗೂ ಸಹಚರರು ಅರ್ಚನಾ ಅವರನ್ನು ನಡುರಸ್ತೆಯಲ್ಲೇ ಕೊಚ್ಚಿ ಕೊಲೆ ಮಾಡಿದ್ದರು!
PublicNext
29/12/2021 09:22 am