ಬೆಂಗಳೂರು: ನಕಲಿ ಅಂಕಪಟ್ಟಿ ನೀಡಿ ಯುಕೆ ತೆರಳುತ್ತಿದ್ದ ಸೇಲ್ಸ್‌ಮ್ಯಾನ್ ಸಿಕ್ಕಿಬಿದ್ದಿದ್ದಾನೆ. ಕೇರಳ ವೈನಾಡು ಮೂಲದ ಸೊಜು ತಜತುವೀಟಿಲ್ ಶಾಜಿ ಎಂಬಾತನೇ ಬಂಧಿತ ಆರೋಪಿ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸರು ಈತನನ್ನು ಬಂಧಿಸಿದ್ದಾರೆ.
ನಕಲಿ ಸ್ಟೂಡೆಂಟ್ ವೀಸಾ ಹಾಗೂ ಅಂಕಪಟ್ಟಿ ಪಡೆದು ಲಂಡನ್‌ಗೆ ತೆರಳಲು ಯತ್ನಿಸಿದ್ದ ಈತ ಲಂಡನ್‌ಗೆ ಹೋಗಿ ಕೋಟಿ ಕೋಟಿ ಸಂಪಾದಿಸಬೇಕೆಂಬ ಕನಸು ಹೊತ್ತಿದ್ದ. ಎರಡೆರಡು ಬಾರಿ ದಾಖಲೆ ಪರಿಶೀಲನೆ ಮಾಡಿದ ಮಾಡಿದ ಅಧಿಕಾರಿಗಳು. ಶಾಜಿಯ ದಾಖಲೆ ನೋಡಿ ಏರ್ ಪೋರ್ಟ್ ಇಮಿಗ್ರೇಷನ್ ಆಫೀಸರ್‌ಗೆ ಅನುಮಾನ ಬಂದಿದೆ. ಆಗ ಬಿಬಿಎ ವ್ಯಾಸಂಗ ಮಾಡಿದ್ದು ಎಲ್ಲಿ..? ಪಾಸ್ ಆಗಿದ್ದು ಯಾವಾಗ ಎಂದು ಅಧಿಕಾರಿಗಳು ಪ್ರಶ್ನಿಸಿದ್ದಾರೆ. ಇಮಿಗ್ರೇಷನ್ ಸಿಬ್ಬಂದಿಯ ಪ್ರಶ್ನೆಗೆ ಕಕ್ಕಾಬಿಕ್ಕಿಯಾಗಿದ್ದ ಶಾಜಿ ಉತ್ತರಿಸಲು ತಡವರಿಸಿದ್ದಾನೆ. ಆ ನಂತರ ಈತ ಗುಲ್ಬರ್ಗಾ ವಿವಿಯ ಎನ್.ವಿ ಡಿಗ್ರಿ ಕಾಲೇಜ್ ಹೆಸರಿನಲ್ಲಿ ಏಜೆನ್ಸಿ ಸಹಾಯದಿಂದ ನಕಲಿ ಅಂಕಪಟ್ಟಿ ಪಡೆದಿದ್ದು ಗೊತ್ತಾಗಿದೆ. ಕೂಡಲ ಶಾಜಿ ಹಾಗೂ ನಕಲಿ ಅಂಕಪಟ್ಟಿ ಮಾಹಿತಿ ನೀಡಿದ್ದ ಅನುರಾಗ್ ಎಂಬಾತನನ್ನು ಸಹ ಬಂಧಿಸಿದ್ದಾರೆ.
ಐಪಿಸಿ 465 (ಫೋರ್ಜರಿ) ಮತ್ತು 471 (ಅಸಲಿಯಂತೆ ನಕಲಿ ದಾಖಲೆ ಸೃಷ್ಟಿ) ಅಡಿ ಪ್ರಕರಣ ದಾಖಲಾಗಿದೆ.
Kshetra Samachara
23/12/2021 02:56 pm