ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇತ್ತೀಚೆಗೆ ಪುಡಿ ಪುಂಡರ ಹಾವಳಿ ಹೆಚ್ಚಾಗಿದೆ. ಡಿಸೆಂಬರ್ 18ರಂದು ರಾತ್ರಿ 10:30ಕ್ಕೆ ನಡುಬೀದಿಯಲ್ಲಿ ವ್ಯಕ್ತಿಯೊಬ್ಬರ ಮೇಲೆ ಪುಂಡರು ಮಚ್ಚು ಬೀಸಲು ಯತ್ನಿಸಿದ್ದಾರೆ. ಈ ಘಟನೆಯ ಎಲ್ಲ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ನಗರದ ಚಂದ್ರಲೇಔಟ್‌ನಲ್ಲಿ ಈ ಘಟನೆ ನಡೆದಿದೆ. ಕ್ಷುಲ್ಲಕ ವಿಚಾರಕ್ಕೆ ವ್ಯಕ್ತಿಯ ಜೊತೆ ಜಗಳ ತೆಗೆದ ಪುಂಡನೊಬ್ಬ ಜಗಳವಾಡುತ್ತಲೇ ಶರ್ಟ್ ಒಳಗಿಂದ ಮಚ್ಚು ತೆಗೆದಿದ್ದಾನೆ. ಕೂಡಲೇ ಮಧ್ಯ ಪ್ರವೇಶಿಸಿದ ಆತನ ಸ್ನೇಹಿತರು ಲಾಂಗ್ ಬೀಸದಂತೆ ತಡೆದಿದ್ದಾರೆ. ಬೈಕ್‌ನಲ್ಲಿ ಬಂದಿದ್ದ ನಾಲ್ವರಿಂದ ಈ ಕೃತ್ಯ ನಡೆದಿದೆ.
ಲಾಂಗ್ ಬೀಸಿದ ಪುಡಿರೌಡಿಗಳನ್ನು ಬಂಧಿಸಲು ಪೊಲೀಸರು ಫೀಲ್ಡಿಗಿಳಿದಿದ್ದಾರೆ. ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
21/12/2021 02:20 pm