ಬೆಂಗಳೂರು : ಮನೆಗೆ ತಡವಾಗಿ ಬಂದಿದ್ದಕ್ಕೆ ಅಣ್ಣ ತಮ್ಮನಿಗೆ ಬುದ್ದಿ ಹೇಳುತ್ತಿದ್ದಂತೆ ಸಿಡಿಮಿಡಿಗೊಂಡ ತಮ್ಮ ಪಿಸ್ತೂಲ್ ಹಿಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರಿನ ಬಿಟಿಎಂ ಲೇಔಟ್ ನ ಬಳಿ ನಡೆದಿದೆ.
ಹೌದು ತಮ್ಮ ಸಲ್ಮಾನ್ ಎಂಬಾತನಿಗೆ ಅಣ್ಣ ಅಮಿನ್ ದಾದಾ ಬುದ್ಧಿ ಮಾತು ಹೇಳುತ್ತಿದ್ದಂತೆ ಅಣ್ಣನ ಹೆಸರಿನಲ್ಲಿ ಲೈಸನ್ಸ್ ಇರುವ ಗನ್ ಹಿಡಿದು ತನ್ನನ್ನೇ ತಾನು ಶೂಟ್ ಮಾಡಿಕೊಳ್ಳಲು ಪ್ರಯತ್ನಿಸಿದ್ದಾನೆ.
ಇನ್ನು ಸಲ್ಮಾನ್ ಜೊತೆ ಅವನ ಸ್ನೇಹಿತ ಫೈಜಲ್ ಕೂಡಾ ಸನ್ಮಾನ್ ಮನೆಗೆ ಬಂದಿದ್ದ ಈ ವೇಳೆ ಸಲ್ಮಾನ್ ಗನ್ ಜೊತೆಗೆ ಮಾಡುತ್ತಿರುವ ಹುಚ್ಚಾಟ ಕಂಡು ಫೈಜಲ್ ಸಲ್ಮಾನ್ ನಿಂದ ಪಿಸ್ತೂಕ್ ಕಸಿದುಕೊಳ್ಳಲು ಪ್ರಯತ್ನಿಸುತ್ತಿರುವಾಗ ಸಲ್ಮಾನ್ ಮೂರು ರೌಂಡ್ ಫೈಯರ್ ಮಾಡಿದ್ದಾನೆ. ಈ ವೇಳೆ ಸ್ನೇಹಿತ ಫೈಜಲ್ ನ ಕೈಗೆ ಗುಂಡು ತಗುಲಿದೆ. ಸದ್ಯ ಗುಂಡೇಟಿನಿಂದ ಗಾಯಗೊಂಡ ಫೈಜಲ್ ಆಸ್ಪತ್ರೆಪಾಲಾಗಿದ್ದಾನೆ.
ಘಟನೆ ಸಂಬಂಧ ಸುದ್ದಗುಂಟೆಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
Kshetra Samachara
20/12/2021 09:00 pm