ಬೆಂಗಳೂರು: ಬರೋಬ್ಬರಿ 83 ಕಂಪನಿಗಳ ಹೆಸರು ಹೇಳಿ ಅದಕ್ಕೆಲ್ಲ ನಾವೇ ಡೈರೆಕ್ಟರ್ ಎನ್ನುತ್ತ ಸಾಲ ಕೊಟ್ಟು ವಸೂಲಿಗೆ ಇಳಿಯುತ್ತಿದ್ದ ಖತರ್ನಾಕ್ ಖದೀಮರನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆಗಿ ಕೆಲಸ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರು ಎಸ್‌ಎಸ್‌ಎಲ್‌ಸಿವರೆಗೆ ಓದಿಕೊಂಡಿದ್ದಾರೆ.
ಕಾಮಾರಾಜ್ ಮೋರೆ ಹಾಗೂ ದರ್ಶನ್ ಚೌಹಾಣ್ ಬಂಧಿತರು. ಆರೋಪಿಗಳು ಜನರಿಗೆ ಲೋನ್ ಕೊಟ್ಟು ಬಳಿಕ ಹಿಂಸೆ ನೀಡುತ್ತಿದ್ದರು. ದಿನಕ್ಕೆ ಮೂರರಿಂದ ನಾಲ್ಕು ಕೋಟಿ ವ್ಯವಹಾರ ನಡೆಸುತ್ತಿದ್ದರು. ಈ ಕಂಪನಿಗಳ ಮುಖ್ಯಸ್ಥರು ಚೀನಾದಲ್ಲಿ ಕುಳಿತು ಕಾರ್ಯನಿರ್ವಹಿಸುತ್ತಿದ್ದರು. ಅವರ ಮೂಲಕ ಸಾಫ್ಟ್ವೇರ್ ಪಡೆದು ಕಾಮಾರಾಜ್ ಮೋರೆ ಹಾಗೂ ದರ್ಶನ್ ಚೌಹಾಣ್ ಜನರಿಗೆ ಲೋನ್ ನೀಡುತ್ತಿದ್ದರು. ಬಳಿಕ ಲೋನ್ ಪಡೆದವರಿಗೆ ಕರೆ ಮಾಡಿ ಬೆದರಿಕೆ ಹಾಗೂ ಹಲ್ಲೆ ನಡೆಸುತ್ತಿದ್ದರು.
ಆರ್ಬಿಐ ಗಮನಕ್ಕೆ ಬಾರದಂತೆ ಆರೋಪಿಗಳು ವ್ಯವಹಾರ ನಡೆಸುತ್ತಿದ್ದರು. ಸಾರ್ವಜನಿಕರು APK Link APP ಮೂಲಕ ಸಾಲ ಪಡೆಯುತ್ತಿದ್ದರು. ಸದ್ಯ ಆರೋಪಿಗಳನ್ನು ಬಂಧಿಸಿರುವ ಸಿಸಿಬಿ ಅಧಿಕಾರಿಗಳು, ಹಲವು ಕಂಪನಿಗಳು ಹಾಗೂ ಅವರು ಬಳಕೆ ಮಾಡುತ್ತಿದ್ದ 65 ಅಕೌಂಟ್ಗಳನ್ನು ಸೀಜ್ ಮಾಡಿದ್ದಾರೆ.
Kshetra Samachara
20/12/2021 04:29 pm