ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಕ್ ಗೆ ಟ್ಯಾಂಕರ್ ವಾಹನ ಡಿಕ್ಕಿ : ಬೈಕ್ ಸವಾರ ಸಾವು

ಬೆಂಗಳೂರು : ಬೈಕ್ ಗೆ ಟ್ಯಾಂಕರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ 8ನೇ ಮೈಲಿಯ ನಾಗಸಂದ್ರ ಮೆಟ್ರೋ ನಿಲ್ದಾಣ್ದದ ಬಳಿ ನಡೆದಿದೆ.

ನೆಲಮಂಗಲದ ಗಂಗಯ್ಯ (65) ಮೃತ ದುರ್ದೈವಿ, ಸೊಸೆ ಜೊತೆ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಸದ್ಯ ಗಾಯಳು ಸೊಸೆ ವಿಜಯಲಕ್ಷ್ಮಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಎರಡು ವಾಹನಗಳ ಮಧ್ಯೆ ಡಿಕ್ಕಿಯಾಗುತ್ತಿದ್ದಂತೆ ಬೈಕ್ ಸವಾರನ ಮೇಲೆ ಟ್ಯಾಂಕರ್ ವಾಹನ ಹರಿದು ಹೋಗಿದೆ. ಘಟನೆ ಬಳಿಕ ಟ್ಯಾಂಕರ್ ವಾಹನ ಬಿಟ್ಟು ಚಾಲಕ ಪರಾರಿಯಾಗಿದ್ದು, ಸ್ಥಳಕ್ಕೆ ಪೀಣ್ಯ ಸಂಚಾರಿ ಪೊಲೀಸರು ಭೇಟಿ ನೀಡಿ ಮೃತದೇಹ ತೆರವು ಕಾರ್ಯ ಮಾಡಿದ್ದಾರೆ. ಪೀಣ್ಯಾ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nirmala Aralikatti
Kshetra Samachara

Kshetra Samachara

19/12/2021 03:41 pm

Cinque Terre

248

Cinque Terre

0

ಸಂಬಂಧಿತ ಸುದ್ದಿ