ಬೆಂಗಳೂರು: 'ನನ್ನ ಸಾವಿಗೆ ನಾನೇ ಕಾರಣ ಯಾರೂ ಜವಬ್ದಾರರಲ್ಲ' ಇಂತಿ ನಿಮ್ಮ ಮೋಹನ್ ಎಂದು ಎರಡು ಲೈನ್ ಡೆತ್ ನೋಟ್ ಬರೆದು ಕತ್ತು ಕೊಯ್ದುಕೊಂಡು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನಗರದ ತಿಪ್ಪೆನಹಳ್ಳಿಯಲ್ಲಿ ವಾಸವಾಗಿದ್ದ ಮೋಹನ, ಗಾರ್ಮಂಟ್ ಕಂಪನಿಯಲ್ಲಿ ನಲ್ಲಿ ಕೆಲಸ ಮಾಡ್ತಿದ್ದ.ನಿನ್ನೆ ರಾತ್ರಿ ಸ್ನೇಹಿತರ ಜೊತೆ ಪಾರ್ಟಿ ಮಾಡಿ ಸಂಬಳ ಸಾಲ್ತಿಲ್ಲ ಜೀವನ ನಡೆಸೋದೆ ಕಷ್ಟ ಎಂದು ಹೇಳಿಕೊಂಡಿದ್ದ. ಇಂದು ಬೆಳಗಿನ ಜಾವ ರೂಮ್ನಿಂದ ಹೊರಗೆ ಬಂದು ಚಾಕುವಿನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಪೀಣ್ಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
18/12/2021 06:03 pm