ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಗೆಳತಿ ಮನೆಯಲ್ಲಿ ಚಿನ್ನಕ್ಕೆ ಕನ್ನ ಹಾಕಿದ ಗೆಳತಿ ಅರೆಸ್ಟ್

ಬೆಂಗಳೂರು: 'ಪರ್ಸನಲ್ ಪ್ರಾಬ್ಲಮ್' ಅಗಿದೆ. ಬಟ್ಟೆ ಚೇಂಜ್ ಮಾಡ್ತೀನಿ ಎಂದು ಹೇಳಿ ಗೆಳತಿಯ ಮನೆಯ ಕೋಣೆಗೆ ಹೋದ ಗೆಳತಿ ಅಲ್ಲಿನ‌ ಅಲ್ಮೆರಾದಲ್ಲಿದ್ದ ಚಿನ್ನಾಭರಣ ಕದ್ದು ಮೆಲ್ಲಗೆ ಎಸ್ಕೇಪ್ ಆಗಿದ್ದಾಳೆ.

ಹೀಗೆ ಮೆಲ್ಲಗೆ ಎಸ್ಕೇಪ್ ಆದವಳನ್ನು ಪೊಲೀಸರು ಕೊನೆಗೂ ಪತ್ತೆ ಹಚ್ಚಿದ್ದಾರೆ. ಅಜರಾ ಸಿದ್ದಿಕಾ (26)ಎಂಬಾಕೆಯೇ ಕಳ್ಳತನದ ಆರೋಪಿ. ಈಕೆ ಕದ್ದಿದ್ದು ಬರೋಬ್ಬರಿ 11 ಲಕ್ಷ ಬೆಲೆಯ 206 ಗ್ರಾಂ ತೂಕದ ಚಿನ್ನಾಭರಣ.

ಜೆ.ಪಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ‌. ಅಣ್ಣನ ಮದುವೆ ಆಮಂತ್ರಣ ಕೊಡಲು ಗೆಳತಿ ರೋಜಾ ಮನೆಗೆ ಬಂದಿದ್ದ ಆರೋಪಿ ಅಜರ್ ಸಿದ್ದಿಕಾ, ಬಟ್ಟೆ ಬದಲಾಯಿಸಬೇಕಿದೆ ಎಂದಿದ್ದಾಳೆ. ಅದಕ್ಕೆ ರೋಜಾ ಕೋಣೆಯಲ್ಲಿ ಬಟ್ಟೆ ಬದಲಿಸುವಂತೆ ಹೇಳಿದ್ದಾಳೆ. ಈ ವೇಳೆ ಅಲ್ಮೇರಾ ತೆರೆದುಕೊಂಡಿದ್ದನ್ನು ನೋಡಿದ ಸಿದ್ದಿಕಾ ಅಲ್ಲಿದ್ದ 11 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದಿದ್ದಾಳೆ. ಸ್ವಲ್ಪ ಹೊತ್ತಿನ ನಂತರ ಈ ವಿಷಯ ಮನೆಯವರಿಗೆ ಗೊತ್ತಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಆ ವೇಳೆ ಮನೆಗೆ ಬಂದಿದ್ದ ಎಲ್ಲರನ್ನೂ ವಿಚಾರಿಸಿದಾಗ ಅಜರ್ ಸಿದ್ದಿಕಾ ಸಿಕ್ಕಿಬಿದ್ದಿದ್ದಾಳೆ. ಈ ಬಗ್ಗೆ ಜೆ.ಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Edited By : Nirmala Aralikatti
Kshetra Samachara

Kshetra Samachara

17/12/2021 08:26 am

Cinque Terre

282

Cinque Terre

0

ಸಂಬಂಧಿತ ಸುದ್ದಿ