ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಾತು ಬಾರದ ಮಗನನ್ನ ಕೊಂದು ಆತ್ಮಹತ್ಯೆ ಮಾಡಿಕೊಂಡ ಅಪ್ಪ

ಬೆಂಗಳೂರು: ಮಗನಿಗೆ ಮಾತು ಬರೋದಿಲ್ಲ. ಕಿವಿ ಅಂತೂ ಕೇಳೋದೇ ಇಲ್ಲ.ಮಗನ ಈ ತೊಂದರೆಗೆ ದಿನವೂ ಗಂಡ-ಹೆಂಡತಿ ಜಗಳ. ಅಮ್ಮನ ಪಕ್ಕ ಮಲಗಿದ್ದ ಮಗನನ್ನ ಕೆರೆದುಕೊಂಡು ಬಂದು ಮನೆಯ ಸಂಪಿಗೆ ಎಸೆದು ತಾನೂ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಬೆಂಗಳೂರಿನ ಸಂಪಂಗಿರಾಮನಗರದಲ್ಲಿ ನಡೆದಿದೆ.

ಮಗನನ್ನ ಕೊಂದ ಅಪ್ಪನ ಹೆಸರು ಸುರೇಶ್. ಮಗನಿಗೆ ಈಗ 10 ವರ್ಷ. ಮಗನ ವಿಚಾರವಾಗಿಯೇ ದಿನವೂ ಪತ್ನಿ ಜೊತೆಗೆ ಜಗಳವಾಡುತ್ತಿದ್ದನಂತೆ ಸುರೇಶ್.

ಬೆಳಗ್ಗೆ ಮಗನನ್ನ ಮನೆಯ ಸಂಪಿಗೆ ಹಾಕಿ ಕೊಂದು ಬಿಟ್ಟಿದ್ದಾನೆ ತಂದೆ ಸುರೇಶ್. ಆದರೆ ತಾನೂ ಬದುಕಿಲ್ಲ. ಶೇಷಾದ್ರಿಪುರಂ ಪೊಲೀಸ್ ಠಾಣಾ ವ್ಯಾಪ್ತಿ ರೈಲ್ವೆ ಹಳಿ ಪಕ್ಕದ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಎಸ್.ಆರ್.ನಗರದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By :
Kshetra Samachara

Kshetra Samachara

13/12/2021 09:44 pm

Cinque Terre

366

Cinque Terre

0

ಸಂಬಂಧಿತ ಸುದ್ದಿ