ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪ್ರಯಾಣಿಕನ ಪ್ಯಾಂಟ್‌ನಲ್ಲಿ 602 ಗ್ರಾಂ ಚಿನ್ನದ ಪೆಸ್ಟ್ ಪತ್ತೆ

ದೇವನಹಳ್ಳಿ: ವಿಶೇಷವಾಗಿ ಹೊಲಿಗೆ ಮಾಡಲಾದ ಪ್ಯಾಂಟ್ ಮತ್ತು ಒಳಉಡುಪು ಧರಿಸಿದ ವ್ಯಕ್ತಿ ಅದರೊಳಗೆ ಅಕ್ರಮವಾಗಿ ಚಿನ್ನ ಸಾಗಣಿಕೆ ಮಾಡುತ್ತಿದ್ದ ಜಾಲವನ್ನು ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಆರೋಪಿಯಿಂದ 602 ಗ್ರಾಂ ಪೆಸ್ಟ್ ರೂಪದ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ.

ಶಾರ್ಜಾದಿಂದ ದೇವನಹಳ್ಳಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಯಾಣಿಕನನ್ನು ಕಸ್ಟಮ್ಸ್ ಸಿಬ್ಬಂದಿ ತಪಾಸಣೆ ಮಾಡುವಾಗ ಚಿನ್ನ ಪತ್ತೆಯಾಗಿದೆ. ವಿಶೇಷವಾಗಿ ಹೊಲಿಗೆ ಮಾಡಲಾದ ಪ್ಯಾಂಟ್ ಮತ್ತು ಒಳ ಉಡುಪು ಧರಿಸಿದ್ದ ವ್ಯಕ್ತಿ ಅದರೊಳಗೆ ಪೆಸ್ಟ್ ರೂಪದ ಚಿನ್ನವನ್ನು ಮರೆಮಾಚಿ ಕಳ್ಳಸಾಗಾಣಿಕೆ ಮಾಡುತ್ತಿದ್ದ. ಕಸ್ಟಮ್ಸ್ ಅಧಿಕಾರಿಗಳು ಆರೋಪಿ ಹಾಗೂ 30 ಲಕ್ಷ ರೂ. ಮೌಲ್ಯದ 602 ಗ್ರಾಂ. ತೂಕದ ಚಿನ್ನವನ್ನು ವಶಕ್ಕೆ ಪಡೆದುಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.

Edited By : Vijay Kumar
Kshetra Samachara

Kshetra Samachara

12/12/2021 09:08 am

Cinque Terre

542

Cinque Terre

0

ಸಂಬಂಧಿತ ಸುದ್ದಿ