ಬೆಂಗಳೂರು: ತನ್ನ ಪ್ರೀತಿಯ ಮಗಳಯೊಂದಿಗೆ ಆಕೆಯ ಪ್ರಿಯಕರನನ್ನು ಕಂಡು ಕೆಂಡವಾದ ತಂದೆ ಆತನನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸದ್ಯ ಪುತ್ರಿ ಪ್ರಿಯಕರನನ್ನು ಕೊಂದು ತಲೆ ಮರೆಸಿಕೊಂಡಿದ್ದ ಆಟೋ ಚಾಲಕನನ್ನು ಬೆಂಗಳೂರಿನ ವಿ. ವಿ. ಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ.
ವಿನೋಬಾ ನಗರದ ಆಟೋ ಚಾಲಕ ನಾರಾಯಣ್ (46) ಬಂಧಿತ. ನಿವೇಶ್ ಕುಮಾರ್ (19) ಕೊಲೆಯಾದ ಯುವಕ.
ನವೆಂಬರ್ 28 ರಂದು ಮನೆಯಲ್ಲಿ ಮಗಳೊಂದಿಗೆ ಏಕಾಂತದಲ್ಲಿದ್ದ ಆಕೆಯ ಪ್ರಿಯಕರ ನೆರೆ ಮನೆಯ ನಿವೇಶ್ ನ ತಲೆಗೆ ಕಟ್ಟಿಗೆಯಿಂದ ಹೊಡೆದು ನಾರಾಯಣ್ ಹತ್ಯೆ ಮಾಡಿದ್ದ. ಈ ಸಂಬಂಧ ದಾಖಲಾಗಿದ್ದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Kshetra Samachara
06/12/2021 02:30 pm