ಬೆಂಗಳೂರು:ಕೋವಿಡ್ ವ್ಯಾಕ್ಸಿನೇಷನ್ ಹಾಕುವದಾಗಿ ವೈದ್ಯಕೀಯ ಸಿಬ್ಬಂದಿಯ ಸೋಗಿನಲ್ಲಿ ಮೂರ್ನಾಲ್ಕು ಯುವಕರು ಮನೆಯೊಳಗೆ ಬಂದಿದ್ದಾರೆ. ಪಿಸ್ತೂಲ್ ತೋರಿಸಿ ಸಿನಿಮಿಯ ರೀತಿಯಲ್ಲಿಯೇ ದರೋಡೆ ಮಾಡಿದ್ದಾರೆ. ಈ ಘಟನೆ ಯಶವಂತಪುರ ಠಾಣಾ ವ್ಯಾಪ್ತಿಯ ಎಸ್‌ಬಿಎಂ ಕಾಲೋನಿಯಲ್ಲಿ ನಡೆದಿದೆ.
ಸಂಪತ್ ಸಿಂಗ್ ಎಂಬುವವರ ಮನೆಯಲ್ಲಿಯೇ ಈ ದರೋಡೆ ನಡೆದಿದೆ. ಸಂಪತ್ ಸಿಂಗ್ ತಾಯಿ ಹಾಗೂ ಪತ್ನಿ ಇಬ್ಬರೇ ಮನೆಯಲ್ಲಿದ್ದರು. ಕಾರ್ ಹಾಗೂ ಬೈಕಿನಲ್ಲಿ ಮನೆಗೆ ಎಂಟ್ರಿಕೊಟ್ಟಿದ್ದರು ದರೋಡೆ ಕೋರರು.
ಆದರೆ ಮನೆಯೊಗಳಗೆ ಬಂದ ಕೂಡಲೇ ಪಿಸ್ತೂಲ್ ತೋರಿಸಿ 150 ಗ್ರಾಂ ಚಿನ್ನಾಭರಣ ದೋಚಿ ಪರಾರಿ ಆಗಿದ್ದಾರೆ.ಯಶವಂತಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
29/11/2021 09:50 pm