ಬೆಂಗಳೂರು: ಅಗಲಿದ ಅಣ್ಣನ ಶೋಕ ಸಹಿಸದೇ ಅದರ ನೋವಿನಿಂದ ಹೊರಬರಲಾಗದೇ ವ್ಯಕ್ತಿಯೊಬ್ಬರು ನೇಣಿಗೆ ಶರಣಾಗಿದ್ದಾರೆ. ನೆಲಮಂಗಲ ನಗರದ ತಿಮ್ಮಶೆಟ್ಟಪ್ಪ ಬಡಾವಣೆಯಲ್ಲಿ ಈ ಘಟನೆ ನಡೆದಿದೆ.
ನಾರಾಯಣ (52) ಎಂಬಾತರೇ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ನಸುಕಿನ ಜಾವ 3-4 ಗಂಟೆಗೆ ತಮ್ಮ ಶೆಡ್‌ನಲ್ಲಿನ ಶೀಟ್ ಆಂಗಲ್‌ಗೆ ಹಗ್ಗದಿಂದ ನೇಣು ಬಿಗಿದುಕೊಂಡು ಜೀವ ಬಿಟ್ಟಿದ್ದಾರೆ. ಸ್ಥಳಕ್ಕೆ ನೆಲಮಂಗಲ ಟೌನ್ ಠಾಣಾ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Kshetra Samachara
28/11/2021 05:55 pm