ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇವನಹಳ್ಳಿ: ಮಹಿಳೆ  ರಂಪಾಟದಲ್ಲಿ ತಪ್ಪಿದ ವಿಮಾನ; ನವದಂಪತಿ 3 ಲಕ್ಷ ಪರಿಹಾರಕ್ಕೆ ಡಿಮ್ಯಾಂಡ್

ದೇವನಹಳ್ಳಿ: ಕೆಂಪೇಗೌಡ  ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮುಂಬೈಗೆ ತೆರಳುತ್ತಿದ್ದ  ಮಹಿಳಾ ಪ್ರಯಾಣಿಕರೊಬ್ಬರು ಸಿಐಎಸ್ ಎಫ್ ಭದ್ರತಾ ಸಿಬ್ಬಂದಿ  ಜೊತೆ ಅಸಭ್ಯವಾಗಿ ವರ್ತಿಸಿ ಕರ್ತವ್ಯಕ್ಕೆ  ಅಡ್ಡಿಪಡಿಸಿದ್ದರು. ಇದೇ ವೇಳೆ  ನವದಂಪತಿ ತಾವು ಹೋಗಬೇಕಾದ ವಿಮಾನ ತಪ್ಪಿಸಿಕೊಂಡಿದ್ದಾರೆ! ಇದಕ್ಕಾಗಿ ಅವರು 3 ಲಕ್ಷ ರೂ. ಪರಿಹಾರಕ್ಕೂ ಒತ್ತಾಯಿಸಿದ್ದಾರೆ.

ಬುಧವಾರ ರಾತ್ರಿ 11:50ರ ಸಮಯದಲ್ಲಿ  ಗೇಟ್ ನಂಬರ್ 4ರಲ್ಲಿ ಘಟನೆ ನಡೆದಿದೆ. ಮುಂಬೈನ ಅಂಧೇರಿ ಪಶ್ಚಿಮದಲ್ಲಿ ನೆಲೆಸಿರುವ ನಿಕೇತ  ಆಗಮ್ ಎಂಬ ಮಹಿಳೆ ಕಾಯುತ್ತಿದ್ದ  ಪ್ರಯಾಣಿಕರ ಪಟ್ಟಿಯನ್ನು ಬೈಪಾಸ್ ಮಾಡಿ ಮುಂದಕ್ಕೆ ಹೋಗಲು ಪ್ರಯತ್ನಿಸಿದ್ದಾರೆ. ಭದ್ರತಾ  ಸಿಬ್ಬಂದಿ, ಮಹಿಳೆಯನ್ನು  ತಡೆದಿದ್ದಾರೆ. ಈ ವೇಳೆ  ಮಹಿಳಾ ಪ್ರಯಾಣಿಕೆ, ಭದ್ರತಾ ಸಿಬ್ಬಂದಿ ವಿರುದ್ಧ ಅವಾಚ್ಯ  ಶಬ್ದಗಳಿಂದ ನಿಂದಿಸಿದ್ದಾರೆ.  ಈ ಜಗಳದಲ್ಲಿ ಸರದಿ ಸಾಲಿನಲ್ಲಿದ್ದ ಮತ್ತಿಕೆರೆ ನಿವಾಸಿಗಳಾದ ಪ್ರಿಯಾಂಕ ರಾಚಮಲ್ಲ ಮತ್ತು  ವಿಜಯಕಾಂತ್ ಭೀಮಿರೆಡ್ಡಿ  ತಮ್ಮ ವಿಮಾನ ತಪ್ಪಿಸಿಕೊಂಡಿದ್ದಾರೆ.

ನವ ದಂಪತಿ ಪ್ರಿಯಾಂಕ ಮತ್ತು  ವಿಜಯಕಾಂತ್ ಗೋ ಫಸ್ಟ್ ಜಿ-8 4032 ವಿಮಾನದಲ್ಲಿ ಮಾಲೆಗೆ ತೆರಳುವವರಿದ್ದರು. ಆದರೆ, ಮಹಿಳೆಯ ರಂಪಾಟದಿಂದಾಗಿ ಸೆಕ್ಯೂರಿಟಿ  ಕ್ಲಿಯರೆನ್ಸ್ ಸಮಯಕ್ಕೆ  ಸರಿಯಾಗಿ  ಪಡೆಯಲು ಸಾಧ್ಯವಾಗದೆ ತಮ್ಮ  ವಿಮಾನ ತಪ್ಪಿಸಿಕೊಂಡರು. ಇದಕ್ಕಾಗಿ  ಈ ದಂಪತಿ 3 ಲಕ್ಷ ರೂ. ಪರಿಹಾರಕ್ಕಾಗಿ ಒತ್ತಾಯಿಸಿದ್ದಾರೆ. ಭದ್ರತಾ  ಸಿಬ್ಬಂದಿ, ರಂಪಾಟ ಮಾಡಿದ  ಮಹಿಳೆ ವಿರುದ್ಧ  ಕೆಂಪೇಗೌಡ  ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್  ಠಾಣೆಯಲ್ಲಿ  ಪ್ರಕರಣ  ದಾಖಲಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

26/11/2021 01:06 pm

Cinque Terre

300

Cinque Terre

0

ಸಂಬಂಧಿತ ಸುದ್ದಿ