ಬೆಂಗಳೂರು: ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಮಾಡುವ ವ್ಯಕ್ತಿಗಳು ಹಾಗೂ ಅಂತಹ ಕಾರುಗಳನ್ನ ಕೊಳ್ಳುವ ಗ್ರಾಹಕರನ್ನು ಟಾರ್ಗೆಟ್ ಮಾಡಿ ವಂಚಿಸುತ್ತಿದ್ದ ಖತರ್ನಾಕ ಆರೋಪಿಯನ್ನ ಬಂಧಿಸುವಲ್ಲಿ ಬೆಂಗಳೂರು ಉತ್ತರ ವಲಯದ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಇನ್ಸ್ಪೆಕ್ಟರ್ ಕಾಂತರಾಜ್, PSI ಲೇಪಾಕ್ಷಿ ಹಾಗೂ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿ ಶ್ರೀನಿವಾಸ್ ಎಂಬಾತ ಮೂಲತಃ ತುಮಕೂರು ಮೂಲದವನಾಗಿದ್ದು, ಕುಟುಂಬ ಸಮೇತ ಸದ್ಯ ದೊಡ್ಡಬಳ್ಳಾಪುರ ದಲ್ಲಿ ವಾಸವಾಗಿದ್ದಾನೆ. ಈತ ಈ ಹಿಂದೆ ಕೂಡ ವಂಚನೆ, ಸುಲಿಗೆ, ಕೊಲೆ ಯತ್ನ ಹೀಗೆ ಅನೇಕ ಅಪರಾಧ ಕೃತ್ಯಗಳಲ್ಲಿ ಬಾಗಿಯಾಗಿ ಜೈಲುವಾಸ ಅನುಭವಿಸಿ ಬಂದಿದ್ದಾನೆ.
ಆರೋಪಿ ಶ್ರೀನಿವಾಸ ಲೋನ್ ಆಪರೇಟರ್ಸ್ ಎನ್ನುವ ಆನ್ ಲೈನ್ app ನಲ್ಲಿ ದೆಹಲಿ ಮೂಲದ ವ್ಯಕ್ತಿಯನ್ನ ಪರಿಚಯ ಮಾಡಿಕೊಂಡು ಅತ್ಯಂತ ಕಡಿಮೆ ರೇಟ್ ಗೆ ದೆಹಲಿ, ಪುದುಚೇರಿ ವಾಹನಗಳನ್ನ ತರುತ್ತಿದ್ದ. ನಂತರ ನಕಲಿ ಡಾಕ್ಯುಮೆಂಟ ತಯಾರಿಸಿ ಇಲ್ಲಿಯವರನ್ನ ಯಾಮಾರಿಸುತ್ತಿದ್ದ. ಲೋನ್ ಇರುವ ವಾಹನಗಳನ್ನು ಗುರುತಿಸುವುದು ನಂತರ ಅವರೊಂದಿಗೆ ವ್ಯವಹರಿಸಿ ವಂಚಿಸುವುದೇ ಈತನ ಹವ್ಯಾಸ ಆಗಿಬಿಟ್ಟಿದೆ.
ಸದ್ಯ ಮಹಾಲಕ್ಷ್ಮಿ ಲೇ ಔಟ್ ಪೊಲೀಸರು ತಮ್ಮ ವ್ಯಾಪ್ತಿಯ ಒಂದು ಕೇಸ್ ಸಂಬಂದಿಸಿದ ನಂತರ ಈತನ ಮುಖವಾಡ ಪತ್ತೆ ಹಚ್ಚಿದ್ದು ಆರೋಪಿ ಶ್ರೀನಿವಾಸನಿಂದ 35 ಲಕ್ಷ ರೂ ಬೆಲೆ ಬಾಳುವ ವಿವಿಧ ಕಂಪನಿಯ 7 ಕಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿಯನ್ನ ಬಂಧಿಸಿ ಇತರೆ ಪ್ರಕರಣಗಳನ್ನ ಪತ್ತೆ ಹಚ್ಚಿರುವ ಮಹಾಲಕ್ಷ್ಮಿ ಲೇಔಟ್ ಠಾಣೆಯ ಇನ್ಸ್ ಪೆಕ್ಟರ್ ಕಾಂತರಾಜ , PSI ಲೇಪಾಕ್ಷಮೂರ್ತಿ ಕ್ರೈಮ್ ಸಿಬ್ಬಂದಿಗಳಾದ ಶ್ರೀನಿವಾಸ ಮೂರ್ತಿ, ನರೇಶ್, ಚೌಡೇಗೌಡ, ಅಭಯ್ ಕುಮಾರ್, ಹಾಗೂ ಚೇತನ್ ಕುಮಾರ್ ಇವರಿಗೆ ಉತ್ತರ ವಲಯದ ಡಿಸಿಪಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
Kshetra Samachara
25/11/2021 04:23 pm