ಬೆಂಗಳೂರು: ಟೆಸ್ಟ್ ಡ್ರೈವ್ ಮಾಡುವ ನೆಪದಲ್ಲಿ ಕಾರನ್ನ ಕದ್ದು ಪರಾರಿಯಾಗುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ.
ಮಾರಾಟಕ್ಕಿಟ್ಟಿದ್ದ ಕಾರುಗಳನ್ನ ಕೊಳ್ಳುವ ನೆಪದಲ್ಲಿ ಟೆಸ್ಟ್ ಡ್ರೈವ್ ಗೆಂದು ತೆಗೆದು ಕೊಂಡು ಹೋಗುತ್ತಿದ್ದ ಆರೋಪಿ ನಂತರ ಮೊಬೈಲ್ ಸ್ವಿಚ್ ಆಫ್ ಮಾಡಿ ಕೊಂಡು ವಂಚಿಸುತ್ತಿದ್ದ.
ಮಹಾಲಕ್ಷ್ಮೀ ಲೇಔಟ್ ನಲ್ಲಿ ಇಟಿಯೋಸ್ ಕಾರೊಂದನ್ನ ಟೆಸ್ಟ್ ಡ್ರೈವ್ ಮಾಡುವ ನೆಪದಲ್ಲಿ ಕೊಂಡೊಯ್ದಿದ್ದ ಆರೋಪಿ,
ಈ ಸಂಬಂದ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತುಇದೀಗ ಆರೋಪಿಯನ್ನ ಬಂಧಿಸುವಲ್ಲಿ ಪೊಲೀಸರು ಸಕ್ಸಸ್ ಆಗಿದ್ದಾರೆ.
ಬಂಧಿತನ ವಿಚಾರಣೆ ವೇಳೆ ವಿವಿಧ ಠಾಣಾ ವ್ಯಾಪ್ತಿಯಲ್ಲಿ 35 ಲಕ್ಷ ಮೌಲ್ಯದ 7 ಕಾರುಗಳನ್ನ ಟೆಸ್ಟ್ ಡ್ರೈವ್ ನೆಪದಲ್ಲಿ ಕೊಂಡೊಯ್ದಿರುವುದು ಪತ್ತೆಯಾಗಿದೆ.
Kshetra Samachara
25/11/2021 12:49 pm