ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇವನಹಳ್ಳಿ: "ಶ್ರೀದುರ್ಗಮ್ಮ ನೀನೇ ಕಾಪಾಡು...; ಗುಡಿ ಮುಂದೆ ನವಜಾತ ಶಿಶು!

ದೇವನಹಳ್ಳಿ: ಮಗುವನ್ನು ದೇವಿಗೆ ಅರ್ಪಿಸುವ ರೀತಿಯಲ್ಲಿ ಆಗ ತಾನೇ ಹುಟ್ಟಿದ ನವಜಾತ ಹೆಣ್ಣು ಶಿಶುವನ್ನು ದೇವಾಲಯದ ಮುಂದೆ ಇಟ್ಟು 'ಮಾತೆ' ಪರಾರಿಯಾಗಿದ್ದಾಳೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರದ ಚಿಕ್ಕಬಳ್ಳಾಪುರ ರಸ್ತೆ ಕೆರೆಯ ಮೇಲಿರುವ ಶ್ರೀ ದುರ್ಗಮ್ಮ ಗುಡಿಯಲ್ಲಿ ಘಟನೆ ನಡೆದಿದೆ. ರಾತ್ರಿಯಷ್ಟೇ ಹುಟ್ಟಿರುವ ಶಿಶುವನ್ನು ದೇವರ ಮುಂದೆ ಸಮರ್ಪಿಸುವಂತೆ ಬಟ್ಟೆಯಲ್ಲಿ ಸುತ್ತಿ, ದೇವಿಯ ಮುಂದೆ ಇಟ್ಟು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಮಗು ಅಳುತ್ತಿದ್ದ ಧ್ವನಿ ಕೇಳಿ ಗುಡಿಯ ಬಳಿಗೆ ಬಂದ ಕೃಷ್ಣಮೂರ್ತಿ ಎಂಬವರು ಶಿಶು ರಕ್ಷಣೆ ಮಾಡಿ ವಿಜಯಪುರ ಸರ್ಕಾರಿ ಆಸ್ಪತ್ರೆಗೆ ನೀಡಿದ್ದಾರೆ.

ಹೆಣ್ಣು ಎಂಬ ಕಾರಣಕ್ಕೆ ಅಥವಾ ಅನೈತಿಕ ಸಂಬಂಧಕ್ಕೆ ಹುಟ್ಟಿದ ಕಾರಣಕ್ಕೆ ಹೆದರಿ ಮಗುವನ್ನು ಗುಡಿಯ ಮುಂಭಾಗದಲ್ಲಿ ಬಿಟ್ಟು ಹೋಗಿರುವ ಸಂಶಯವಿದೆ.

ವಿಜಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Edited By : Shivu K
Kshetra Samachara

Kshetra Samachara

25/11/2021 10:01 am

Cinque Terre

262

Cinque Terre

0

ಸಂಬಂಧಿತ ಸುದ್ದಿ