ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಡಿಎ ಮೇಲೆ ಎಸಿಬಿ ದಾಳಿ: ಬಯಲಾಗುತ್ತಿವೆ ಸಾಲು ಸಾಲು ಅಕ್ರಮಗಳು

ಬೆಂಗಳೂರು: ನಗರದ ಐದು ಬಿಡಿಎ ಕಚೇರಿಗಳ ಮೇಳೆ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳಿಗೆ ಮಾಹಿತಿ ಕಲೆ ಹಾಕುವ ವೇಳೆ ಬೆಚ್ಚಿ ಬೀಳಿಸುವ ಸಂಗತಿಗಳು ಬಟಾಬಯಲಾಗಿವೆ. ಎಗ್ಗಿಲ್ಲದೇ ಹಲವಾರು ಅಕ್ರಮಗಳು ನಡೆದಿರೋದು ಬೆಳಕಿಗೆ ಬಂದಿದೆ.

ಭೂಸ್ವಾಧೀನ ಮಾಡಿಕೊಂಡ ಜಮೀನಿಗೆ ಕಡಿಮೆ ಪರಿಹಾರ ನೀಡಿ ಅನರ್ಹ ವ್ಯಕ್ತಿಗೆ ಸೈಟ್ ಹಂಚಿಕೆ ಮಾಡಿರುವುದು ದಾಖಲೆ ಸಮೇತವೇ ಗೊತ್ತಾಗಿದೆ. ಉತ್ತರಹಳ್ಳಿಯ ಭಾರತ್ ಎಚ್.ಬಿ.ಸಿ.ಎಸ್ ಲೇಔಟ್ ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ.

ಬಿಡಿಎ ಅಧಿಕಾರಿಗಳು ಎಸಗಿದ್ದಾರೆ ಎನ್ನಲಾದ ಇನ್ನೂ ಕೆಲವು ಅಕ್ರಮಗಳು ಈ ಕೆಳಗಿನಂತಿವೆ.

*ನಕ್ಷೆ ರೀತ್ಯಾ ಕಟ್ಟಡ ನಿರ್ಮಾಣ ಮಾಡದಿದ್ದರೂ ಅಂತವರ ಮೇಲೆ ಬಿಡಿಎ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ.

*ನಿವೇಶನ ಹಂಚಿಕೆಯಾದವರಿಗೆ ಸಂಬಂಧಿಸಿದೆಡೆ ಬಿಟ್ಟು ಬೇರೆಡೆಗೆ ನಿವೇಶನ ಹಂಚಲಾಗಿದೆ.

*ಹಳೆಯ ಬಡಾವಣೆಯ ಖಾಲಿ ನಿವೇಶನಗಳಲ್ಲಿ‌ ಖಾಸಗಿ ವ್ಯಕ್ತಿಗಳಿಗೆ ಶೆಡ್ ಹಾಕಲು ಅವಕಾಶ ನೀಡಲಾಗಿದೆ.

*ನಿವೇಶನ ಬೇರೊಬ್ಬರಿಗೆ ನೀಡಿ ಭೂಸ್ವಾಧೀನ ಪಡಿಸಿಕೊಂಡ ನಿವೇಶನದ ಮಾಲಿಕರಿಗೆ ಪರಿಹಾರ ನೀಡಿಲ್ಲ.

*ಹರಾಜು ಪ್ರಕ್ರಿಯೆ ಕೈಗೊಳ್ಳದೇ ಕಾರ್ನರ್ ಸೈಟುಗಳ ಹಂಚಿಕೆ ಮಾಡಿರುವುದು.

*ವಿಭಾಗವಾರು ಕಡತಗಳನ್ನ ಸರಿಯಾಗಿ ನಿರ್ವಹಣೆ ಮಾಡದಿರುವುದು.

*ಕೆಂಪೇಗೌಡ ಬಡಾವಣೆ ಸಂಬಂಧಿಸಿದಂತೆ ಭೂಮಾಲಿಕರನ್ನ ಬಿಟ್ಟು 3 ನೇ ವ್ಯಕ್ತಿಗೆ ಪರಿಹಾರ ನೀಡಿರುವುದು ಪತ್ತೆ.

ಇನ್ನೂ ಹಲವಾರು ಅಕ್ರಮಗಳ ಬಗ್ಗೆ ಎಸಿಬಿ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

23/11/2021 09:47 pm

Cinque Terre

206

Cinque Terre

0

ಸಂಬಂಧಿತ ಸುದ್ದಿ