ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಬಳ್ಳಾಪುರ: ಪೊಲೀಸ್ ನಂಬಿ ಬಂದ ವಿವಾಹಿತ ಮಹಿಳೆ ದುರಂತ ಅಂತ್ಯ

ಚಿಕ್ಕಬಳ್ಳಾಪುರ: ಪೊಲೀಸ್ ಕಾನ್ ಸ್ಟೇಬಲ್ ಅನೈತಿಕ ಸಂಬಂಧಕ್ಕೆ ವಿವಾಹಿತ ಮಹಿಳೆ ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ ನಗರದ ಮಾರಮ್ಮ ದೇವಸ್ಥಾನದ ಬಳಿ ನಡೆದಿದೆ.

ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸಿಕ್ಕ ಮಹಿಳೆಯನ್ನ ರಾಜೇಶ್ವರಿ ಎಂದು ಗುರುತಿಸಲಾಗಿದೆ.ಅನೈತಿಕ ಸಂಬಂಧ ಹೊಂದಿದ್ದ ಪೊಲೀಸ್ ಕಾನ್ ಸ್ಟೇಬಲ್ ಅನ್ನ ಅನಂತ್ ಕುಮಾರ್ ಎಂದು ಹೇಳಲಾಗಿದೆ. ಅನಂತ್ ಕುಮಾರ್ ಮತ್ತು ರಾಜೇಶ್ವರಿ ನಡುವೆ ಜಗಳ ನಡೆದಿತ್ತು. ಆ ಬಳಿಕವೇ ರಾಜೇಶ್ವರಿ ನೇಣು ಬಿಗಿದುಕೊಂಡಿದ್ದಾಳೆ ಅಂತಲೇ ಹೇಳಲಾಗುತ್ತಿದೆ.

ಚಿಕ್ಕಬಳ್ಳಾಪುರ ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಅನಂತ್ ಕುಮಾರ್ ಪೊಲೀಸ್ ಕಾನ್ ಸ್ಟೇಬಲ್ ಆಗಿದ್ದು,ಹಣದ ಆಮೀಷ ತೋರಿಸಿ ಗಂಡನಿಂದ ರಾಜೇಶ್ವರಿಯನ್ನ ಅನಂತ್‌ಕುಮಾರ ದೂರ ಮಾಡಿದ್ದಾನೆ ಅನ್ನೋ ಆರೋಪ ಇದೆ.ರಾಜೇಶ್ವರಿ ಪೋಷಕರು ಅನಂತಕುಮಾರ್ ವಿರುದ್ಧ ಕೊಲೆಯ ದೂರು ಕೊಟ್ಟಿದ್ದಾರೆ.ಸದ್ಯ ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯಲ್ಲಿ ipc 302 ರಡಿ ಪ್ರಕರಣ ದಾಖಲಾಗಿದೆ.ಆದರೆ ಆರೋಪಿ ಪೊಲೀಸ್ ಕಾನ್ ಸ್ಟೇಬಲ್ ಅನಂತ್ ಕುಮಾರ್ ಪರಾರಿಯಾಗಿದ್ದಾನೆ.

Edited By :
Kshetra Samachara

Kshetra Samachara

22/11/2021 10:38 pm

Cinque Terre

302

Cinque Terre

0

ಸಂಬಂಧಿತ ಸುದ್ದಿ