ಬೆಂಗಳೂರು: ನಗರದಲ್ಲಿ ಮನೆ ಕೆಲಸ ಮಾಡಿಕೊಂಡಿದ್ದ ಕಿಲಾಡಿ ಲೇಡಿ ಮನೇಲಿ ಯಾರು ಇಲ್ಲದ ವೇಳೆ ಕಳ್ಳತನ ಮಾಡಿ ಪರಾರಿಯಾಗಿದ್ದಳು, ಈ ಐನಾತಿ ಕಳ್ಳಿಯನ್ನ ಯಲಹಂಕ ಪೊಲೀಸರು ಸದ್ಯ ಬಂಧನ ಮಾಡಿದ್ದಾರೆ
ಯಲಹಂಕ ಮಾರುತಿನಗರ ನಿವಾಸಿ ಸಬಿನಾ ಬಂಧಿತ ಆರೋಪಿ ಮಹಿಳೆಯಾಗಿದ್ದು,ಬಂಧಿತಳಿಂದ 14 ಲಕ್ಷ ಮೌಲ್ಯದ 310 ಗ್ರಾಂ ತೂಕದ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಪಿ.ಎಸ್ ಶೇಷಾದ್ರಿ ಎಂಬುವರ ಮನೆಯಲ್ಲಿ ಕೆಲಸಕ್ಕಿದ್ದ ಸಬಿನಾ ಐದು ತಿಂಗಳಿಂದ ಮನೆ ಕೆಲಸ ಮಾಡಿಕೊಂಡಿದ್ದಳು, ಚಿನ್ನಾಭರಣ ಇಟ್ಟಿದ್ದ ಜಾಗ ನೋಡಿ ಕದ್ದು ಪರಾರಿಯಾಗಿದ್ದಳು ,ಸದ್ಯ ಆರೋಪಿ ಬಂಧಿಸಿ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿರುವ ಯಲಹಂಕ ಠಾಣೆ ಪೊಲೀಸರು ತನಿಖೆಯನ್ನ ಮುಂದುವರೆಸಿದ್ದಾರೆ.
Kshetra Samachara
20/11/2021 04:08 pm